ಜೀ ಕುಟುಂಬ ಅವಾರ್ಡ್ಸ್ ವೇದಿಕೆ ಮೇಲೆ ಮಂಡಿಯೂರಿ ಅನುಶ್ರೀಗೆ ಪ್ರಪೋಸ್ ಮಾಡಿದ ರೋಶನ್
ಆ್ಯಂಕರ್ ಅನುಶ್ರೀ ಅವರು ಜೀ ಕನ್ನಡದಲ್ಲಿ ಹಲವು ವರ್ಷಗಳಿಂದ ಆ್ಯಂಕರ್ ಆಗಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಈಗ ಜೀ ಕನ್ನಡ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ಪತಿ ರೋಶನ್ ಅನುಶ್ರೀಗೆ ಪ್ರಪೋಸ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಅನುಶ್ರೀ ಅವರು ಜೀ ಕನ್ನಡದ ಭಾಗ ಆಗಿದ್ದಾರೆ. ಅವರು ಜೀ ಕನ್ನಡವನ್ನು ತಮ್ಮದೇ ಕುಟುಂಬ ಎಂಬ ರೀತಿಯಲ್ಲಿ ನೋಡುತ್ತಾರೆ. ಈಗ ಅವರು ‘ಜೀ ಕುಟುಂಬ ಅವಾರ್ಡ್ಸ್’ ವೇದಿಕೆ ಮೇಲೆ ಪತಿ ಜೊತೆ ಬಂದಿದ್ದಾರೆ. ರೋಶನ್ ಅವರು ಅನುಶ್ರೀಗೆ ಹೂವು ಕೊಟ್ಟು ಪ್ರಪೋಸ್ ಮಾಡಿದ್ದಾರೆ. ಶಿವಣ್ಣ ಅವರು ಅನುಶ್ರೀಗಾಗಿ ಹಾಡೊಂದನ್ನು ಹಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

