IPL 2025: ಸಮರಾಭ್ಯಾಸ ಶುರು ಮಾಡಿದ ಸಿಎಸ್​ಕೆ, ಸಿಕ್ಸರ್​ಗಳ ಮಳೆಗರೆದ ಧೋನಿ; ವಿಡಿಯೋ ನೋಡಿ

Updated on: Mar 01, 2025 | 5:02 PM

Dhoni IPL 2025: ಚೆನ್ನೈ ಸೂಪರ್ ಕಿಂಗ್ಸ್ ತಂಡವು 2025ರ ಐಪಿಎಲ್ ಗೆ ತಯಾರಿ ಆರಂಭಿಸಿದೆ. ಮಹೇಂದ್ರ ಸಿಂಗ್ ಧೋನಿ ಅವರು ತಂಡ ಸೇರಿ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ತಂಡದ ಅಭ್ಯಾಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. 10 ದಿನಗಳ ತರಬೇತಿ ಶಿಬಿರ ನವಲೂರಿನಲ್ಲಿ ನಡೆಯುತ್ತಿದೆ.

ಎಲ್ಲಾ ತಂಡಗಳು ಈಗಾಗಲೇ 2025 ರ ಐಪಿಎಲ್​ಗೆ ತಮ್ಮ ಸಿದ್ಧತೆಗಳನ್ನು ಆರಂಭಿಸಿವೆ. 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೂಡ ತಮ್ಮ ಸಮರಾಭ್ಯಾಸವನ್ನು ಶುರು ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಈಗಾಗಲೇ ತಂಡವನ್ನು ಕೂಡಿಕೊಂಡಿದ್ದು, ನೆಟ್ಸ್​ನಲ್ಲಿ ಬೆವರು ಹರಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೂ ಸಾಮಾಜಿಕ ಜಾಲತಣದಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಧೋನಿ ಇತರ ಆಟಗಾರರೊಂದಿಗೆ ಕಠಿಣ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು.

ಟ್ರೇಲರ್ ತೋರಿಸಿದ ಧೋನಿ

ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ 10 ದಿನಗಳ ಶಿಬಿರವನ್ನು ತಮಿಳುನಾಡಿನ ಚೆನ್ನೈನ ನವಲೂರಿನಲ್ಲಿ ಆಯೋಜಿಸಿದ್ದು, ಅಲ್ಲಿ ಎಲ್ಲಾ ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಕೂಡ ಐಪಿಎಲ್ 2025 ಗಾಗಿ ಮೈದಾನದಲ್ಲಿ ಬೆವರು ಸುರಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿರುವುದನ್ನು ಕಾಣಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ