ಕೋಮ ಸೇರಿದ ಧ್ರುವ ಅಭಿಮಾನಿ; ನಟನ ಎದುರು ಕುಟುಂಬದವರ ಕಣ್ಣೀರು
ಧ್ರುವ ಅವರು ಪೃಥ್ವಿರಾಜ್ ಕುಟುಂಬದವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ, ಅವರ ಕಣ್ಣೀರು ನಿಲ್ಲಲೇ ಇಲ್ಲ.
ಧ್ರುವ ಸರ್ಜಾ (Dhruva Sarja) ಅಭಿಮಾನಿ ಪೃಥ್ವಿರಾಜ್ ಅವರು ಬೈಕ್ನಿಂದ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿದೆ. ಬೈಕ್ ರೈಡಿಂಗ್ ವೇಳೆ ಅವರು ಹೆಲ್ಮೆಟ್ ಹಾಕಿರಲಿಲ್ಲ. ಸದ್ಯ ಅವರು ಕೋಮ ಸೇರಿದ್ದಾರೆ. ಧ್ರುವ ಅವರು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಗ ಪೃಥ್ವಿರಾಜ್ ಕುಟುಂಬದವರು ಧ್ರುವ ಎದುರು ಕಣ್ಣೀರು ಹಾಕಿದ್ದಾರೆ. ಮಗನ ಪರಿಸ್ಥಿತಿ ನೆನೆದು ಬೇಸರಗೊಂಡಿದ್ದಾರೆ. ಧ್ರುವ ಅವರು ಪೃಥ್ವಿರಾಜ್ ಕುಟುಂಬದವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ, ಅವರ ಕಣ್ಣೀರು ನಿಲ್ಲಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 18, 2023 04:15 PM