ಕೇಂದ್ರದ ಎನ್ ಪಿ ಎಸ್ ಅಡಿ ಸಂಗ್ರಹವಾದ ರೂ. 65,000 ಕೋಟಿ ಹಣ ಅದಾನಿಯ ಪಾಲಾಗಿದೆ: ಎಮ್ ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿ ಎನ್ ಪಿ ಎಸ್ ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಮೈಸೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಎಮ ಲಕ್ಷ್ಮಣ್ (M Lakshman) ಅವರು ಸುದ್ದ್ದಿಗೋಷ್ಟಿ ನಡೆಸಿದಾಗೆಲ್ಲ ಹೊಸ ಹೊಸ ವಿಷಯಗಳನ್ನು, ಸರ್ಕಾರದ ಹಗರಣಗಳನ್ನು ಜನರ ಗಮನಕ್ಕೆ ತರುತ್ತಾರೆ. ಶನಿವಾರ ನಗರದಲ್ಲಿ ಮಾತಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಪಿಂಚಣಿ ಯೋಜನೆಯಡಿ (NPS) ಕರ್ನಾಟಕದ ಸರ್ಕಾರೀ ನೌಕರರಿಂದ ರೂ. 65,000 ಕೋಟಿ ಸಂಗ್ರಹವಾಗಿದೆ. ಆದರೆ ಆ ಹಣ ಎಲ್ಲಿ ಹೋಯಿತು ಅಂತ ಯಾರಿಗೂ ಗೊತ್ತಿಲ್ಲ. ನಿಸ್ಸಂದೇಹವಾಗಿ ಅದು ಗೌತಮ್ ಅದಾನಿ (Gautam Adani) ಹುಂಡಿ ಸೇರಿರುತ್ತದೆ ಎಂದು ಲಕ್ಷ್ಮಣ್ ಹೇಳಿದರು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿ ಎನ್ ಪಿ ಎಸ್ ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos