Koppal: ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಅಂತ ಭೈರತಿ ಸುರೇಶ್ ಹೇಳಿದ್ದಕ್ಕೆ ವೇದಿಕೆ ಮೇಲೆ ಶುರುವಾಯ್ತು ಜಗಳ!
ಆದರೆ ಪೋಲಿಸರು ಆ ವ್ಯಕ್ತಿಯನ್ನು ವಾಪಸ್ಸು ಅವರ ಸ್ಥಳ ಕರೆದೊಯ್ಯುತ್ತಾರೆ. ಇಂಥವರಿಗೆಲ್ಲ ನಾನು ಹೆದರೋನಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲೇಬೇಕು ಅಂತ ಸುರೇಶ್ ಜೋರು ಧ್ವನಿಯಲ್ಲಿ ಪುನಃ ಅರಚುತ್ತಾರೆ!
ಕೊಪ್ಪಳ: ಮೊದಲು ಭೈರತಿ ಬಸವರಾಜ (Byrathi Basavaraj) ಸಿದ್ದರಾಮಯ್ಯನವರು (Siddaramaiah) ಪರಮಾಪ್ತರೆನಿಸಿಕೊಂಡಿದ್ದರು. ಅವರು ಬಿಜೆಪಿಗೆ ವಲಸೆ ಹೋದ ಮೇಲೆ ಅವರ ಸಹೋದರ ಭೈರತಿ ಸುರೇಶ್ (Byrathi Suresh) ಆ ಜಾಗ ಕಬಳಿಸಿರುವಂತಿದೆ. ಸಿದ್ದರಾಮಯ್ಯ ಎಲ್ಲೇ ಹೋದರೂ ಅವರೊಂದಿಗೆ ಸುರೇಶ್ ಕಾಣಿಸಿಕೊಳ್ಳುತ್ತಾರೆ. ಇವತ್ತು ಜಿಲ್ಲೆಯ ಯಲಬುರ್ಗಾದಲ್ಲಿ ನಡೆದ ಕುರುಬ ಸಮುದಾಯ ಸಮಾವೇಶದಲ್ಲಿ ಸುರೇಶ್ ಆವೇಶದಲ್ಲಿ ಸಿದ್ದರಾಮಯ್ಯ ಪುನಃ ಮುಖ್ಯಮಂತ್ರಿಯಾಗೆಬೇಕು ಅಂತ ಹೇಳುವಾಗ ವೇದಿಕೆಯ ಮೇಲೆ ಕುಳಿತಿದ್ದ ಸಮುದಾಯದ ಮುಖಂಡನೊಬ್ಬ ಜೊತೆ ಜಗಳಕ್ಕೆ ಬರುತ್ತಾರೆ. ಆದರೆ ಪೋಲಿಸರು ಆ ವ್ಯಕ್ತಿಯನ್ನು ವಾಪಸ್ಸು ಅವರ ಸ್ಥಳ ಕರೆದೊಯ್ಯುತ್ತಾರೆ. ಇಂಥವರಿಗೆಲ್ಲ ನಾನು ಹೆದರೋನಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲೇಬೇಕು ಅಂತ ಸುರೇಶ್ ಜೋರು ಧ್ವನಿಯಲ್ಲಿ ಪುನಃ ಅರಚುತ್ತಾರೆ!
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 18, 2023 05:59 PM
Latest Videos