ಗುರುವಾರ ಉತ್ತರ ಕರ್ನಾಟಕ, ಶುಕ್ರವಾರ ಬೆಂಗಳೂರು ಶನಿವಾರ ಪುನಃ ಉತ್ತರ ಕರ್ನಾಟಕ! ಸಿದ್ದರಾಮಯ್ಯ ಕಾಲಿಗೆ ಚಕ್ರಗಳು!!

ಗುರುವಾರ ಉತ್ತರ ಕರ್ನಾಟಕ, ಶುಕ್ರವಾರ ಬೆಂಗಳೂರು ಶನಿವಾರ ಪುನಃ ಉತ್ತರ ಕರ್ನಾಟಕ! ಸಿದ್ದರಾಮಯ್ಯ ಕಾಲಿಗೆ ಚಕ್ರಗಳು!!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 18, 2023 | 4:37 PM

ಅವರು ಭಾಷಣ ಮಾಡಲು ಅಂತ ಎದ್ದು ನಿಲ್ಲುತ್ತಿದ್ದಂತೆಯೇ ಜನ ಜೋರಾಗಿ ಅರಚಲು ಪ್ರಾರಂಭಿಸುತ್ತಾರೆ. ಅವರನ್ನು ಸುಮ್ಮನಿರುವಂತೆ ಸೂಚನಾರ್ಥಕವಾಗಿ ಹೇಳಿ ಸಿದ್ದರಾಮಯ್ಯ ಮಾತು ಆರಂಭಿಸುತ್ತಾರೆ.

ಕೊಪ್ಪಳ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡಿರುವಂತಿದೆ. ಗುರುವಾರ ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಕಾಣಿಸುತ್ತಾರೆ ಶುಕ್ರವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬಜೆಟ್ ಮಂಡಿಸುವಾಗ ಸದನದಲ್ಲಿ ಕಿವಿ ಮೇಲೆ ಹೂ ಇಟ್ಟುಕೊಂಡು ಕಾಣಿಸುತ್ತಾರೆ ಮತ್ತು ಇವತ್ತು (ಶನಿವಾರ) ಪುನಃ ಉತ್ತರ ಕರ್ನಾಟಕದ ಯಲಬುರ್ಗಾದಲ್ಲಿ ಸಂಗೊಳ್ಳಿ ರಾಯಣ್ಣನ (Sangolli Rayanna) ಪ್ರತಿಮೆ ಅನಾವರಣಗೊಳಿಸಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡುತ್ತಾರೆ. ಸಿದ್ದರಾಮಯ್ಯ ಸರ್ವಾಂತರಯಾಮಿ? ಇರಬಹುದು ಮಾರಾಯ್ರೇ. ಅವರು ಭಾಷಣ ಮಾಡಲು ಅಂತ ಎದ್ದು ನಿಲ್ಲುತ್ತಿದ್ದಂತೆಯೇ ಜನ ಜೋರಾಗಿ ಅರಚಲು ಪ್ರಾರಂಭಿಸುತ್ತಾರೆ. ಅವರನ್ನು ಸುಮ್ಮನಿರುವಂತೆ ಸೂಚನಾರ್ಥಕವಾಗಿ ಹೇಳಿ ಸಿದ್ದರಾಮಯ್ಯ ಮಾತು ಆರಂಭಿಸುತ್ತಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ