‘ಮಾರ್ಟಿನ್’ ಟ್ರೈಲರ್ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳ ಸಂಭ್ರಮ

Martin: ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ಟ್ರೈಲರ್ ಆಗಸ್ಟ್ 05 ರಂದು ಮುಂಬೈನಲ್ಲಿ ಬಿಡುಗಡೆ ಆಗಲಿದೆ. ಅದಕ್ಕೆ ಮುಂಚಿತವಾಗಿ ಆಗಸ್ಟ್ 04 ರಂದು ಅಭಿಮಾನಿಗಳಿಗೆಂದು ‘ಮಾರ್ಟಿನ್’ ಟ್ರೈಲರ್​ನ ವಿಶೇಷ ಶೋ ಅನ್ನು ಬೆಂಗಳೂರಿನ ವಿರೇಶ್ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು.

‘ಮಾರ್ಟಿನ್’ ಟ್ರೈಲರ್ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳ ಸಂಭ್ರಮ
|

Updated on: Aug 04, 2024 | 1:51 PM

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ಟ್ರೈಲರ್ ಬಿಡುಗಡೆ ಇಂದು (ಆಗಸ್ಟ್ 04) ವೀರೇಶ್ ಚಿತ್ರಮಂದಿರದಲ್ಲಿ ನಡೆದಿದೆ. ಅಭಿಮಾನಿಗಳಿಗಾಗಿಯೆಂದು ವಿಶೇಷ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಟ್ರೈಲರ್ ನೋಡಲು ಟಿಕೆಟ್ ಖರೀದಿಸಿ ದೊಡ್ಡ ಸಂಖ್ಯೆಯಲ್ಲಿ ಧ್ರುವ ಅಭಿಮಾನಿಗಳು ಆಗಮಿಸಿದ್ದರು. ವೀರೇಶ್ ಚಿತ್ರಮಂದಿರದ ಮುಂದೆ ಪಟಾಕಿ ಹಚ್ಚಿ, ಡೊಳ್ಳಿನ ಸದ್ದಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಸಿನಿಮಾದ ಟ್ರೈಲರ್ ಆಗಸ್ಟ್ 05 ರಂದು ಮುಂಬೈನಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಆದರೆ ಅಭಿಮಾನಿಗಳಿಗೆಂದೇ ಇಂದು (ಆಗಸ್ಟ್ 04) ವಿಶೇಷವಾಗಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಶೋನಿಂದ ಸಂಗ್ರಹವಾಗುವ ಹಣವನ್ನು ಗೋಶಾಲೆಗೆ ನೀಡುವುದಾಗಿ ಧ್ರುವ ಸರ್ಜಾ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us