ಮೃತ PSI ಪರಶುರಾಮ ಪತ್ನಿಗೆ ಸರ್ಕಾರಿ ಕೆಲಸ, ಪರಿಹಾರ: ಪರಮೇಶ್ವರ್‌ ಘೋಷಣೆ

ಯಾದಗಿರಿ ಪಿಎಸ್​ಐ ಪರಶುರಾಮ್ ಅನುಮಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಪಾಟೀಲ್ ವಿರುದ್ಧ ಎಫ್​ಐಆರ್ ಆಗಿದ್ದು, ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಇನ್ನು ಮೃತ ಪರಶುರಾಮ್ ಪತ್ನಿಗೆ ಪರಿಹಾರದ ಜೊತೆಗೆ ಸರ್ಕಾರಿ ಹುದ್ದೆ ನೀಡಲು ತೀರ್ಮಾನಿಸಿದೆ. ಈ ಬಗ್ಗೆ ಖುದ್ದು ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಮೃತ PSI ಪರಶುರಾಮ ಪತ್ನಿಗೆ ಸರ್ಕಾರಿ ಕೆಲಸ, ಪರಿಹಾರ: ಪರಮೇಶ್ವರ್‌ ಘೋಷಣೆ
|

Updated on: Aug 04, 2024 | 2:41 PM

ಬೆಂಗಳೂರು, (ಆಗಸ್ಟ್ 04): ಮೃತ ಪಿಎಸ್‌ಐ ಪರಶುರಾಮ್ (PSI Parashuram) ಪತ್ನಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮತ್ತು ಪರಿಹಾರ ನೀಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ (G Parameshwara) ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಪಿಎಸ್‌ಐ ಪರಶುರಾಮ್ ನಿಗೂಢ ಸಾವು ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿನ ಆಡಳಿತ ಪಕ್ಷದ ಶಾಸಕ ಮೇಲೆ ಆಪಾದನೆ ಮಾಡಿದ್ದಾರೆ. ಸಿಐಡಿ ತನಿಖೆಗೆ ಪ್ರಕರಣವನ್ನು ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆ ಅಲ್ಲ ಎಂದು ಇಲಾಖೆ ಹೇಳಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಗೊತ್ತಾಗುತ್ತೆ. ಪರಶುರಾಮ್‌ ಪತ್ನಿಗೆ ಇಲಾಖೆಯಲ್ಲಿ ಕೆಲಸ (Government Job), ಪರಿಹಾರ ಕೊಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಸ್ಪಷ್ಟಪಡಿಸಿದರು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us