‘ಡಿಎಸ್​ ಬಾಸ್​’ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಿದ ಧ್ರುವ ಸರ್ಜಾ ಫ್ಯಾನ್ಸ್

‘ಮಾರ್ಟಿನ್’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಟ್ರೇಲರ್​ ಬಗ್ಗೆ ಎಲ್ಲಿಲ್ಲದ ಹೈಪ್​ ಕ್ರಿಯೇಟ್​ ಆಗಿದೆ. ಫ್ಯಾನ್ಸ್​ಗೆ ಒಂದು ದಿನ ಮುಂಚೆಯೇ ಟ್ರೇಲರ್​ ತೋರಿಸಲಾಗಿದೆ. ಈ ವೇಳೆ ಚಿತ್ರಮಂದಿರದ ಹೊರಗೆ ಅಭಿಮಾನಿಗಳು ಧ್ರುವ ಸರ್ಜಾ ಅವರ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಈ ಚಿತ್ರಕ್ಕೆ ಎ.ಪಿ. ಅರ್ಜುನ್​ ಅವರು ನಿರ್ದೇಶನ ಮಾಡಿದ್ದಾರೆ.

‘ಡಿಎಸ್​ ಬಾಸ್​’ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಿದ ಧ್ರುವ ಸರ್ಜಾ ಫ್ಯಾನ್ಸ್
|

Updated on: Aug 04, 2024 | 4:55 PM

ನಟ ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ‘ಡಿಎಸ್​ ಬಾಸ್​’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಅವರ ಪ್ರತಿ ಸಿನಿಮಾ ಬಿಡುಗಡೆ ವೇಳೆ ಹಬ್ಬದಂತೆ ಸಂಭ್ರಮಿಸುತ್ತಾರೆ. ಧ್ರುವ ಸರ್ಜಾ ನಟನೆಯ ‘ಮಾರ್ಟಿನ್​’ ಸಿನಿಮಾದ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಟ್ರೇಲರ್​ ರಿಲೀಸ್​ಗೆ ಕ್ಷಣಗಣನೆ ಆರಂಭ ಆಗಿದೆ. ಟ್ರೇಲರ್​ ಬಿಡುಗಡೆಗೆಯನ್ನು ಕೂಡ ದೊಡ್ಡದಾಗಿ ಸೆಲೆಬ್ರೇಟ್​ ಮಾಡಲಾಗುತ್ತಿದೆ. ಇಂದು (ಆಗಸ್ಟ್​ 4) ಬೆಂಗಳೂರಿನ ವೀರೇಶ್​ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಎಕ್ಸ್​ಕ್ಲೂಸಿವ್​ ಆಗಿ ಟ್ರೇಲರ್​ ಪ್ರದರ್ಶನ ಮಾಡಲಾಯಿತು. ಈ ವೇಳೆ ಥಿಯೇಟರ್​ ಮುಂದೆ ಹಾಕಲಾಗಿದ್ದ ‘ಡಿಎಸ್​ ಬಾಸ್​’ ಎಂದು ಬರೆದ ಪೋಸ್ಟರ್​ಗೆ ಫ್ಯಾನ್ಸ್​ ಹಾಲಿನ ಅಭಿಷೇಕ ಮಾಡಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us