AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಸ್​ಐ ಅನುಮಾನಾಸ್ಪದ ಸಾವು: ಆಡಿಯೋ ಬಗ್ಗೆ ಸ್ನೇಹಿತನ ಸ್ಫೋಟಕ ಹೇಳಿಕೆ

ಪಿಎಸ್​ಐ ಅನುಮಾನಾಸ್ಪದ ಸಾವು: ಆಡಿಯೋ ಬಗ್ಗೆ ಸ್ನೇಹಿತನ ಸ್ಫೋಟಕ ಹೇಳಿಕೆ

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 04, 2024 | 6:37 PM

ಯಾದಗಿರಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪಿಎಸ್​ಐ ಪರಶುರಾಮ ಅವರ ಸಾವಿನ ಸುತ್ತ ಇದೀಗ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಇನ್ನು ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಪರಶುರಾಮ ಸ್ನೇಹಿತ ಯರಿಸ್ವಾಮಿ ಪ್ರತಿಕ್ರಿಯಿಸಿದ್ದು, ಪರಶುರಾಮ ನನ್ನ ಜೊತೆ ಮಾತನಾಡಿರುವ ಆಡಿಯೋಗಳಿವೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡ್ತೇವೆ ಎಂದಿದ್ದಾರೆ.

ಕೊಪ್ಪಳ, ಆಗಸ್ಟ್​ 04: ಯಾದಗಿರಿ ಪಿಎಸ್​ಐ ಪರಶುರಾಮ್ (PSI parashuram) ಅನುಮಾನಾಸ್ಪದ ಸಾವು ಹಿನ್ನೆಲೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ, ಪುತ್ರ ಪಂಪಣ್ಣಗೌಡ ವಿರುದ್ಧ ಕೇಸ್​ ದಾಖಲಾಗಿತ್ತು. ಖುದ್ದು ಪತ್ನಿ ಶ್ವೇತಾರೇ ಕೇಸ್​ ದಾಖಲಿಸಿದ್ರು. ಇದೀಗ ಬೆನ್ನಲ್ಲೇ ಇದೀಗ ಪ್ರಕರಣವನ್ನ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಈ ಮಧ್ಯೆ ಪಿಎಸ್​ಐ ಪರಶುರಾಮ ನನ್ನ ಜೊತೆ ಮಾತನಾಡಿರುವ ಆಡಿಯೋಗಳಿವೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಪರಶುರಾಮ ಸ್ನೇಹಿತ (Friend) ಯರಿಸ್ವಾಮಿ ಹೇಳಿದ್ದಾರೆ. ಸೋಮನಾಳ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯರಿಸ್ವಾಮಿ, ಹಣ ಹೊಂದಿಸಲು ಪರಶುರಾಮ ಪತ್ನಿಯ ಚಿನ್ನಾಭರಣ ಅಡವಿಟ್ಟಿದ್ದ. ಬ್ಯಾಂಕ್‌ನಿಂದ ಪರಶುರಾಮ ಪರ್ಸನಲ್ ಲೋನ್ ಸಹ ತಗೊಂಡಿದ್ದ. ಶಾಸಕರಿಗೆ ನೀಡಲು ಹಣ ಹೊಂದಿಸುತ್ತಿದ್ದ. ಆದರೆ ಶಾಸಕರು ಕೇಳಿದಷ್ಟು ಕೊಡಲು ಆಗಲ್ಲ ಅಂತಾ ಹೇಳಿದ್ದ. ಪೊಲೀಸ್ ಇಲಾಖೆಯಲ್ಲಿ ಇದೆಲ್ಲಾ ಸಹಜ. ವರ್ಗಾವಣೆಯಾದ ದಿನವೂ ಕರೆ ಮಾಡಿ ತನ್ನ ನೋವು ತೋಡಿಕೊಂಡಿದ್ದ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.