ದೆಹಲಿ ಮೆಟ್ರೋದಲ್ಲಿ ಹೆಚ್ಡಿ ದೇವೇಗೌಡ ಪ್ರಯಾಣ: ಬಹುದಿನದ ಆಸೆ ನೆರವೇರಿತು ಎಂದ ಮಾಜಿ ಪ್ರಧಾನಿ
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಇಂದು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ಡಿಎಂಆರ್ಸಿನಿರ್ದೇಶಕ ಮನೋಜ್ ಸಿಂಘಾಲ್ ಮತ್ತು ಇತರೆ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ಹಲವು ವರ್ಷಗಳಿಂದ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದು ಇಂದು ನೆರವೇರಿದೆ ಎಂದು ಹೇಳಿದ್ದಾರೆ.
ದೆಹಲಿ, ಆಗಸ್ಟ್ 04: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Deve Gowda) ಅವರು ಇತ್ತೀಚೆಗೆ ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಇಂದು ದೆಹಲಿ ಮೆಟ್ರೋದಲ್ಲಿ (delhi metro) ಪ್ರಯಾಣ ಮಾಡಿದ್ದಾರೆ. ಇದರ ವಿಡಿಯೋವನ್ನು ತಮ್ಮ ಟ್ವಿಟರ್ ಹಂಚಿಕೊಂಡಿರುವ ಅವರು, ಹಲವು ವರ್ಷಗಳಿಂದ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದು ಇಂದು ನೆರವೇರಿದೆ. ನನ್ನ ಸಂಪುಟದಲ್ಲಿ ಮತ್ತು ಪ್ರತಿಪಕ್ಷಗಳ ಪ್ರತಿರೋಧದ ನಡುವೆಯೂ ನಾನು 1996ರಲ್ಲಿ ಪ್ರಧಾನಿಯಾಗಿದ್ದ ಈ ಯೋಜನೆಗೆ ಆರ್ಥಿಕ ಮುಚ್ಚುವಿಕೆಯನ್ನು ನೀಡಿದ್ದೆ. ಇದು ಜನರಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos