ತುಮಕೂರು: ಆಟವಾಡ್ತಿದ್ದ ಮಕ್ಕಳನ್ನು ಅಪಹರಿಸಲು ಯತ್ನ; ಜಸ್ಟ್​ ಮಿಸ್​

ಪೋಷಕರೇ ಎಚ್ಚರ! ಮಕ್ಕಳನ್ನು ಆಟವಾಡಲು ಬಿಟ್ಟಾಗ ಅವರ ಕಡೆ ಗಮನವಿಡಿ. ಹೌದು, ತುಮಕೂರು ಹೊರವಲಯದ ಅಣ್ಣೇನಹಳ್ಳಿ-ಕಾರಾಗೃಹ ರಸ್ತೆಯ ಸ್ವರ್ಣಗೃಹ ಲೇಔಟ್‌ನಲ್ಲಿ ಆಟವಾಡುತ್ತಿದ್ದ ಬಾಲಕರನ್ನು ಕಿಡ್ನ್ಯಾಪ್‌ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತುಮಕೂರು: ಆಟವಾಡ್ತಿದ್ದ ಮಕ್ಕಳನ್ನು ಅಪಹರಿಸಲು ಯತ್ನ; ಜಸ್ಟ್​ ಮಿಸ್​
|

Updated on:Aug 04, 2024 | 7:20 PM

ತುಮಕೂರು, ಆ.04: ಆಟವಾಡುತ್ತಿದ್ದ ಇಬ್ಬರು ಮಕ್ಕಳನ್ನು ಅಪಹರಿಸಲು ಯತ್ನಿಸಿದ ಘಟನೆ ತುಮಕೂರು ಹೊರವಲಯದ ಅಣ್ಣೇನಹಳ್ಳಿ-ಕಾರಾಗೃಹ ರಸ್ತೆಯಲ್ಲಿ ನಡೆದಿದೆ. ಇಂದು‌(ಭಾನುವಾರ) ಮಧ್ಯಾಹ್ನ ಸ್ವರ್ಣಗೃಹ ಲೇಔಟ್‌ನಲ್ಲಿ ಆಟವಾಡುತ್ತಿದ್ದ ಬಾಲಕರನ್ನು ಕಿಡ್ನ್ಯಾಪ್‌ ಮಾಡಲು ಯತ್ನಿಸಿದ್ದು, ಕೂಡಲೇ ಎಚ್ಚೆತ್ತ ಮಕ್ಕಳು ಕಿರುಚಾಡಲು ಶುರುಮಾಡಿದ್ದಾರೆ. ಇದರಿಂದ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಎಸ್ಕೇಪ್ ಆಗಿದ್ದಾರೆ. ಘಟನೆಯಿಂದ ತುಮಕೂರಿನ ಮಂದಿ ಆತಂಕಕ್ಕೊಳಗಾಗಿದ್ದಾರೆ. ಇನ್ನು ಖದೀಮರು  ಮಕ್ಕಳನ್ನು ಕಿಡ್ನ್ಯಾಪ್‌ ಮಾಡಲು ಯತ್ನಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:17 pm, Sun, 4 August 24

Follow us