ದೊಡ್ಡ ಪರದೆ ಮೇಲೆ ‘ಮಾರ್ಟಿನ್​’ ಟ್ರೇಲರ್​ ಬಿಡುಗಡೆ ಮಾಡಿದ್ದು ಯಾಕೆ? ಉತ್ತರಿಸಿದ ನಿರ್ದೇಶಕ

ದೊಡ್ಡ ಪರದೆ ಮೇಲೆ ‘ಮಾರ್ಟಿನ್​’ ಟ್ರೇಲರ್​ ಬಿಡುಗಡೆ ಮಾಡಿದ್ದು ಯಾಕೆ? ಉತ್ತರಿಸಿದ ನಿರ್ದೇಶಕ

Malatesh Jaggin
| Updated By: ಮದನ್​ ಕುಮಾರ್​

Updated on: Aug 04, 2024 | 9:02 PM

ಅಕ್ಟೋಬರ್​ 11ರಂದು ‘ಮಾರ್ಟಿನ್’ ಸಿನಿಮಾ ತೆರೆಕಾಣಲಿದೆ. 13 ಭಾಷೆಯಲ್ಲಿ ಟ್ರೇಲರ್​ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಮೊದಲಿಗೆ ಕನ್ನಡದ ಅಭಿಮಾನಿಗಳಿಗೆ ಟ್ರೇಲರ್​ ತೋರಿಸಿ ಪ್ರತಿಕ್ರಿಯೆ ಪಡೆಯಲಾಗಿದೆ. ಚಿತ್ರಮಂದಿರದಲ್ಲಿ ಟ್ರೇಲರ್​ ಅನಾವರಣ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ನಿರ್ದೇಶಕ ಎ.ಪಿ. ಅರ್ಜುನ್​ ಅವರು ಉತ್ತರ ನೀಡಿದ್ದಾರೆ.

ನಟ ಧ್ರುವ ಸರ್ಜಾ ಅವರು ಅಭಿನಯಿಸಿದ ‘ಮಾರ್ಟಿನ್​’ ಸಿನಿಮಾದ ಟ್ರೇಲರ್​ ಅನ್ನು ದೊಡ್ಡ ಪರದೆಯಲ್ಲಿ ಅಭಿಮಾನಿಗಳಿಗೆ ತೋರಿಸಲಾಗಿದೆ. ಬೆಂಗಳೂರಿನ ವೀರೇಶ್​ ಚಿತ್ರಮಂದಿರದಲ್ಲಿ ಟ್ರೇಲರ್​ ಬಿತ್ತರ ಆಗಿದೆ. ಅದನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ‘ಒಟಿಟಿ ಬಂದ ಬಳಿಕ ಜನರು ಚಿತ್ರಮಂದಿರಕ್ಕೆ ಬರಲ್ಲ ಅಂತ ಕೆಲವರು ಹೇಳುತ್ತಿದ್ದರು. ಇಂದು ಟ್ರೇಲರ್​ ನೋಡಲು ಚಿತ್ರಮಂದಿರಕ್ಕೆ ಬಂದ ಜನರನ್ನು ನೋಡಿದರೆ ಖುಷಿ ಆಗುತ್ತಿದೆ. ಒಳ್ಳೆಯ ಸಿನಿಮಾಗಳನ್ನು ಜನರು ಎಂದಿಗೂ ಕೈ ಬಿಡಲ್ಲ. ಜನರು ಟ್ರೇಲರ್​​ ಅನ್ನು ದೊಡ್ಡ ಸ್ಕ್ರೀನ್​ನಲ್ಲಿ ಎಂಜಾಯ್​ ಮಾಡಲಿ ಎಂಬುದು ನಮ್ಮ ಉದ್ದೇಶ ಆಗಿತ್ತು. ಆ ಅನುಭವವೇ ಬೇರೆ. ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಕಾಂಟೆಂಟ್​ ಯಾವ ರೀತಿ ಇದೆ ಎಂಬುದನ್ನು ನಾವು ತೋರಿಸಬೇಕಿತ್ತು. ಅದಕ್ಕಾಗಿ ಟ್ರೇಲರ್​ ಹೀಗೆ ಬಿಡುಗಡೆ ಮಾಡಿದ್ದೇವೆ’ ಎಂದಿದ್ದಾರೆ ಎ.ಪಿ. ಅರ್ಜುನ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.