ಡ್ರೋಣ್​ನಲ್ಲಿ ಜೋಗ ಜಲಪಾತದ ರಮಣೀಯ ದೃಶ್ಯ…ಜೋಗದ ಸಿರಿ ಸೊಬಗನ್ನು ಕಣ್ತುಂಬಿಕೊಳ್ಳಿ

ಮಲೆನಾಡ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ. ಇಲ್ಲಿನ ದೃಶ್ಯ ಈಗ ರುದ್ರ ರಮಣೀಯ. ಹಾಲಿನ ನೊರೆಯಂತೆ ಧುಮ್ಮಿಕ್ಕಿತ್ತಿರುವ ನೀರು, ಸೃಷ್ಟಿಯಾಗುವ ಮಂಜಿನ ದಟ್ಟ ಹೊಗೆ ಇದನ್ನೆಲ್ಲ ಕಣ್ಣಾರೆ ನೋಡೋದೆ ಚೆಂದ. ಇನ್ನು ಜೋಗದ ಸೊಬಗು ಡ್ರೋಣ್​ನಲ್ಲಿ ಕಂಡಿದ್ದು ಹೇಗೆಂದು ನೋಡಿ.

ಡ್ರೋಣ್​ನಲ್ಲಿ ಜೋಗ ಜಲಪಾತದ ರಮಣೀಯ ದೃಶ್ಯ...ಜೋಗದ ಸಿರಿ ಸೊಬಗನ್ನು ಕಣ್ತುಂಬಿಕೊಳ್ಳಿ
|

Updated on: Aug 04, 2024 | 6:17 PM

ಶಿವಮೊಗ್ಗ, (ಆಗಸ್ಟ್ 04): ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಇನ್ನು ಫಾಲ್ಸ್​ಗಳು ಮೈದುಂಬಿ ಹರಿಯುತ್ತಿವೆ. ಅದರಂತೆ ವಿಶ್ವವಿಖ್ಯಾತ ಜೋಗ ಜಲಪಾತ ಸಹ ಧುಮ್ಮಿಕುತ್ತಿದೆ. ಹೌದು… ಮೊದಲೇ ಜೋಗದ ಜಲಪಾತ ನೋಡಲು ಅತಿ ಸುಂದರ. ಇನ್ನು ಮಳೆಗಾಲದಲ್ಲಿ ಕೇಳಬೇಕೇ. ಬರೋಬ್ಬರಿ 830 ಅಡಿಗಳ ಎತ್ತರದಿಂದ ಹಾಲಿನಂತೆ ನೀರು ಬೀಳುತ್ತಿರುವುದು ಡ್ರೋಣ್​​ನಲ್ಲಿ ಸೆರೆಹಿಡಿಯಲಾಗಿದ್ದು, ಅದ್ಭುತ ರಮಣೀಯ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲವು. 5 ವರ್ಷಗಳ ನಂತರ ಲಿಂಗನಮಕ್ಕಿ ಅಣೆಕಟ್ಟಿನ ಎಲ್ಲಾ 13 ಗೇಟ್‌ಗಳು ಓಪನ್ ಮಾಡಿದ್ದರಿಂದ ಈ ಚಮತ್ಕಾರಕ್ಕೆ ಸಾಕ್ಷಿಯಾಗಿದೆ. ಈ ರೀತಿ ಉಕ್ಕಿ ಹರಿದಿದ್ದು, 2019ರಲ್ಲಿ. ಈಗ ಐದು ವರ್ಷಗಳ ನಂತರ ಪ್ರವಾಸಿಗರ ಕಣ್ಮನಸೆಳೆಯುವಂತಿದೆ. ಅದರಲ್ಲೂ ಈ ಡ್ರೋಣ್​ ಕ್ಯಾಮರಾದಲ್ಲಿ ನೋಡಿದಾಗ ಹೇಗೆ ವರ್ಣಿಸುವುದು ಅಂತ ಪದಗಳೇ ಸಿಗಲ್ಲ ಆ ರೀತಿ ನೀರು ಹರಿದುಬಂದು ಬೀಳುತ್ತಿದೆ. ಜೋಗದ ಸೊಬಗಿನ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಅಪರೂಪದ ದೃಶ್ಯವನ್ನು ನೀವೂ ಒಂದು ಸಲ ಕಣ್ತುಂಬಿಕೊಂಡು ಬಿಡಿ.

Follow us