ವಯನಾಡು ಮಹಾದುರಂತ: ಒಡತಿ ಕಣ್ಣಿಗೆ ಬೀಳುತ್ತಿದ್ದಂತೆ ಓಡಿ ಬಂದು ಬಿಗಿದಪ್ಪಿದ ಸಾಕು ನಾಯಿ

ವಯನಾಡು ಮಹಾದುರಂತ: ಒಡತಿ ಕಣ್ಣಿಗೆ ಬೀಳುತ್ತಿದ್ದಂತೆ ಓಡಿ ಬಂದು ಬಿಗಿದಪ್ಪಿದ ಸಾಕು ನಾಯಿ

TV9 Web
| Updated By: ಆಯೇಷಾ ಬಾನು

Updated on: Aug 04, 2024 | 2:19 PM

ಚೂರಲ್ ಮಲದಲ್ಲಿ ಗುಡ್ಡ ಕುಸಿತ ಹಿನ್ನಲೆ ಮನೆಯವರನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು. ಕುಟುಂಬಸ್ಥರು ಇಂದು ಕಾಳಜಿ ಕೇಂದ್ರದಿಂದ ತಾವಿದ್ದ ಸ್ಥಳಕ್ಕೆ ಬಂದಿದ್ದು ಕುಟುಂಬಸ್ಥರು ಬರುತ್ತಿದ್ದಂತೆ ಒಡತಿ ಬಳಿಗೆ ನೋಡಿ ಬಂದ ಶ್ವಾನ ಅಪ್ಪಿಕೊಂಡಿದೆ. ಈ ವೇಳೆ ಶ್ವಾನ ಹಾಗೂ ಒಡತಿ ಕಣ್ಣೀರು ಹಾಕಿದ ಘಟನೆ ಮನಕಲಕುವಂತಿತ್ತು.

ಕೇರಳ, ಆಗಸ್ಟ್.04: ಕೇರಳದಲ್ಲಿ ಘನಘೋರ ದುರಂತ ನಡೆದು ಆರು ದಿನಗಳು ಕಳೆದಿವೆ. ಇಷ್ಟಾದ್ರೂ ಅಲ್ಲಿ ನರಕಸದೃಶ್ಯವೇ ಕಾಣ್ತಿದೆ. ಕಲ್ಲುಬಂಡೆ, ಕೆಸರಿನ ಮಧ್ಯೆ, ಮರದ ಬುಡಗಳ ಕೆಳಗೆ ಶವಗಳೇ ಕಾಣ್ತಿವೆ. ಸಾವಿನ ಎದುರು ಹೋರಾಡಿ ಬದುಕಿ ಬಂದವರ ಮುಖದಲ್ಲಿ ಕರಾಳತೆಯ ಕರಿಛಾಯೆ ಇನ್ನೂ ಆವರಿಸಿದೆ. ಶ್ವಾನವೊಂದು ತನ್ನ ಒಡತಿಯನ್ನು ನೋಡಿದ ತಕ್ಷಣ ಓಡೊಡಿ ಬಂದು ಅಪ್ಪಿಕೊಂಡ ಘಟನೆ ನಡೆದಿದ್ದು ಮನಕಲಕುವಂತಿತ್ತು.

ಲಿಯೋ ಎಂಬ ಹೆಸರಿನ ಶ್ವಾನ ತನ್ನ ಮನೆ ಒಡತಿ ಉಮಾರನ್ನು ನೋಡಿದ ತಕ್ಷಣ ಪ್ರೀತಿಯಿಂದ ಓಡಿ ಬಂದು ಅಪ್ಪಿಕೊಂಡಿದೆ. ಚೂರಲ್ ಮಲದಲ್ಲಿ ಗುಡ್ಡ ಕುಸಿತ ಹಿನ್ನಲೆ ಮನೆಯವರನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು. ಕುಟುಂಬಸ್ಥರು ಇಂದು ಕಾಳಜಿ ಕೇಂದ್ರದಿಂದ ತಾವಿದ್ದ ಸ್ಥಳಕ್ಕೆ ಬಂದಿದ್ದು ಕುಟುಂಬಸ್ಥರು ಬರುತ್ತಿದ್ದಂತೆ ಒಡತಿ ಬಳಿಗೆ ನೋಡಿ ಬಂದ ಶ್ವಾನ ಅಪ್ಪಿಕೊಂಡಿದೆ. ಈ ವೇಳೆ ಶ್ವಾನ ಹಾಗೂ ಒಡತಿ ಕಣ್ಣೀರು ಹಾಕಿದ ಘಟನೆ ಮನಕಲಕುವಂತಿತ್ತು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ