Martin Trailer: ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟ ಧ್ರುವ ಸರ್ಜಾ
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಕನ್ನಡ ಸಿನಿಮಾ ಆಗಸ್ಟ್ 5 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಆದರೆ ಮೊದಲು ಅಭಿಮಾನಿಗಳಿಗೆ ಟ್ರೈಲರ್ ಅನ್ನು ಬೆಂಗಳೂರಿನಲ್ಲಿಯೇ ತೋರಿಸಲಿದ್ದಾರೆ ಧ್ರುವ ಸರ್ಜಾ.
ಧ್ರುವ ಸರ್ಜಾ ತಮ್ಮ ಅಭಿಮಾನಿಗಳನ್ನು ವಿಐಪಿಗಳು ಎಂದೇ ಕರೆಯುವುದು. ಧ್ರುವ ನಟನೆಯ ‘ಮಾರ್ಟಿನ್’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 5 ರಂದು ಮುಂಬೈನಲ್ಲಿ ದೊಡ್ಡ ಮಟ್ಟದಲ್ಲಿ ನಡೆಸಲು ಚಿತ್ರತಂಡ ಸಜ್ಜಾಗಿದೆ. ಆದರೆ ಇದರ ನಡುವೆ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ಧ್ರುವ ಸರ್ಜಾ ನೀಡಿದ್ದಾರೆ. ಮುಂಬೈಗೆ ಬಂದು ಟ್ರೈಲರ್ ನೋಡಲು ಸಾಧ್ಯವಾಗದ ಕಾರಣ ಆಗಸ್ಟ್ 4 ರಂದು ಬೆಂಗಳೂರಿನ ವಿರೇಶ್ ಚಿತ್ರಮಂದಿರದಲ್ಲಿ ಮುಂಚಿತವಾಗಿಯೇ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಧ್ರುವ ಸರ್ಜಾ, ಅಭಿಮಾನಿಗಳು, ಕನ್ನಡಿಗರು ಮೊದಲು ಟ್ರೈಲರ್ ನೋಡಬೇಕು ಹಾಗಾಗಿ ವೀರೇಶ್ ಚಿತ್ರಮಂದಿರದಲ್ಲಿ ಟ್ರೈಲರ್ ಬಿಡುಗಡೆ ಶೋ ಇರಿಸಿಕೊಂಡಿದ್ದೇವೆ. ಬುಕ್ ಮೈ ಶೋನಲ್ಲಿ ಆಗಸ್ಟ್ 2 ರಿಂದಲೇ ಟಿಕೆಟ್ ದೊರಕಲಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 31, 2024 08:26 PM
Latest Videos