ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ

Edited By:

Updated on: Jul 21, 2024 | 3:20 PM

‘ಮಾರ್ಟಿನ್​’ ಸಿನಿಮಾದ ಬಿಡುಗಡೆಯ ಕೆಲಸಗಳಲ್ಲಿ ಬ್ಯುಸಿ ಆಗಿರುವ ನಟ ಧ್ರುವ ಸರ್ಜಾ ಅವರು ಅಭಿಮಾನಿಗಳ ಕಡೆಗೂ ಗಮನ ನೀಡಿದ್ದಾರೆ. ಪ್ರತಿ ಭಾನುವಾರದಂತೆ ಅವರು ಇಂದು (ಜುಲೈ 21) ಕೂಡ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಟ ಧ್ರುವ ಸರ್ಜಾ ಅವರು ಪ್ರತಿ ಭಾನುವಾರ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಧ್ರುವ ಅವರನ್ನು ನೋಡಲು ಬೇರೆ ಬೇರೆ ಊರುಗಳಿಂದ ಬರುವ ಅಭಿಮಾನಿಗಳು ಬಗೆಬಗೆಯ ಗಿಫ್ಟ್​ ತರುತ್ತಾರೆ. ನೆಚ್ಚಿನ ಹೀರೋ ಮುಂದೆ ಡೈಲಾಗ್​ ಹೊಡೆಯುತ್ತಾರೆ. ಹಾಗಾಗಿ ಧ್ರುವ ಅವರು ಅಭಿಮಾನಿಗಳಿಗಾಗಿ ಪ್ರತಿ ಭಾನುವಾರವನ್ನು ಮೀಸಲಿಡುತ್ತಾರೆ. ಇದಕ್ಕೆ ನಟನ ಕುಟುಂಬದವರ ಬೆಂಬಲ ಕೂಡ ಇದೆ. ಆ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ. ‘ಇದು ಬೆಲೆ ಕಟ್ಟಲಾಗದ ಕ್ಷಣಗಳು. ಯಾರೋ ಹೆತ್ತ ಮಕ್ಕಳು ಇಲ್ಲಿ ಬಂದು ನಮಗೋಸ್ಕರ ಟೈಮ್​ ಕೊಡುತ್ತಾರೆ. ನನಗಾಗಿ ಡೈಲಾಗ್​ ಹೇಳುತ್ತಾರೆ, ಡೈಲಾಗ್​ ಬರೆಯುತ್ತಾರೆ. ಅದು ಖುಷಿ ಕೊಡುವ ವಿಚಾರ. ನಮ್ಮ ಕುಟುಂಬದವರು ಕೂಡ ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನನ್ನ ಹೆಂಡತಿ, ಮಕ್ಕಳು, ತಂದೆ-ತಾಯಿ ಭಾನುವಾರ ಹೊರಗೆ ಹೋಗೋಣ ಅಂತ ಕೇಳಲ್ಲ. ನಾನು ಫ್ಯಾನ್ಸ್​ ಜೊತೆ ಬ್ಯುಸಿಯಾಗಿ ಇರುತ್ತೇನೆ ಎಂಬುದು ಅವರಿಗೂ ಗೊತ್ತು’ ಎಂದಿದ್ದಾರೆ ಧ್ರುವ ಸರ್ಜಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 21, 2024 02:52 PM
Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More