‘ಕೆರೆಬೇಟೆ 100 ಪರ್ಸೆಂಟ್ ಚೆನ್ನಾಗಿದೆ’; ಗೆಳೆಯನ ಸಿನಿಮಾ ನೋಡಿ ಮೆಚ್ಚಿದ ಧ್ರುವ ಸರ್ಜಾ
ಇತ್ತೀಚೆಗೆ ಬಿಡುಗಡೆ ಆದ ‘ಕೆರೆಬೇಟೆ’ ಸಿನಿಮಾವನ್ನು ಇಂದು (ಮಾರ್ಚ್ 20) ಧ್ರುವ ಸರ್ಜಾ ನೋಡಿದ್ದಾರೆ. ತಮ್ಮ ಗೆಳೆಯರಾದ ಗೌರಿ ಶಂಕರ್ಗೆ ಅವರು ಸಾಥ್ ನೀಡಿದ್ದಾರೆ. ಎಲ್ಲರೂ ಈ ಸಿನಿಮಾ ನೋಡಿ ಎಂದು ಪ್ರೇಕ್ಷಕರಲ್ಲಿ ಧ್ರುವ ಸರ್ಜಾ ಮನವಿ ಮಾಡಿದ್ದಾರೆ. ‘ನೀವು ಕೆರೆಬೇಟೆ ಸಿನಿಮಾವನ್ನು ನೋಡುತ್ತೀರಿ ಎಂಬ ನಂಬಿಕೆ ನನಗಿದೆ. ಇನ್ನೂ ಇದು ಚಿತ್ರಮಂದಿರದಲ್ಲಿದೆ. ನಾವೆಲ್ಲರೂ ಒಟ್ಟಾಗಿ ಪ್ರಯತ್ನ ಮಾಡೋಣ. ಈ ಸಿನಿಮಾ 100 ಪರ್ಸೆಂಟ್ ಚೆನ್ನಾಗಿದೆ’ ಎಂದಿದ್ದಾರೆ ಧ್ರುವ ಸರ್ಜಾ.
ನಟ ಗೌರಿಶಂಕರ್ (Gowrishankar) ಅಭಿನಯದ ‘ಕೆರೆಬೇಟೆ’ ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿದೆ. ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಈಗ ನಟ ಧ್ರುವ ಸರ್ಜಾ ಅವರು ‘ಕೆರೆಬೇಟೆ’ ಸಿನಿಮಾ (Kerebete Movie) ನೋಡಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಗೌರಿಶಂಕರ್ ಮತ್ತು ಧ್ರುವ ಸರ್ಜಾ ಅವರು ಬಹಳ ಹಳೆಯ ಸ್ನೇಹಿತರು. ಹಲವು ವರ್ಷಗಳ ಹಿಂದೆ ಒಟ್ಟಿಗೆ ತರಬೇತಿ ಪಡೆದವರು. ಈಗ ಗೆಳೆಯನ ಸಿನಿಮಾಗೆ ಧ್ರುವ ಸರ್ಜಾ (Dhruva Sarja) ಅವರು ಪ್ರೋತ್ಸಾಹ ನೀಡಿದ್ದಾರೆ. ‘ಈ ಸಿನಿಮಾ ತುಂಬ ಚೆನ್ನಾಗಿದೆ. ನಮ್ಮ ಪ್ರೇಕ್ಷಕರು ಇಷ್ಟು ದಿನ ಚಿತ್ರಮಂದಿರಕ್ಕೆ ಯಾಕೆ ಬರಲಿಲ್ಲ ಎಂಬುದೇ ಅಚ್ಚರಿ. ಗೌರಿಶಂಕರ್, ಬಿಂದು ಶಿವರಾಮ್ ಅವರ ನಟನೆ, ರಾಜ್ಗುರು ಅವರ ನಿರ್ದೇಶನ ಬಹಳ ಚೆನ್ನಾಗಿದೆ. ಈ ಸಿನಿಮಾ ಒಂದು ಪ್ಯಾಕೇಜ್. ಈ ಚಿತ್ರಕ್ಕೆ ಕನ್ನಡ ಕಲಾಭಿಮಾನಿಗಳು ಪ್ರತಿಫಲ ನೀಡಲೇಬೇಕು. ಈ ಸಿನಿಮಾವನ್ನು ಮಿಸ್ ಮಾಡಿದರೆ ಎಷ್ಟೋ ಜನರಿಗೆ ನೀವು ಪ್ರೋತ್ಸಾಹ ಕೊಡದೇ ಇದ್ದಂಗೆ ಆಗತ್ತೆ. ಚೆನ್ನಾಗಿರುವ ಸಿನಿಮಾವನ್ನು ಗೆಲ್ಲಿಸುತ್ತಾರೆ ಅಂತ ನಾವು ಯಾವಾಗಲೂ ನಂಬಿದ್ದೇವೆ. ಅದಕ್ಕೆ ನಾವೇ ಒಂದು ಉದಾಹರಣೆ ಆಗೋಣ. ಇನ್ನೊಮ್ಮೆ ಆ ಉದಾಹರಣೆ ಸೆಟ್ ಮಾಡೋಣ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.