ಧ್ರುವನಾರಾಯಣ ಹಳೆ ಮೈಸೂರು ಭಾಗದ ಅತ್ಯಂತ ಪ್ರಭಾವಿ ನಾಯಕ, ಅವರ ಸಾವು ಇಡೀ ಸಮಾಜಕ್ಕೆ ಬಹುದೊಡ್ಡ ನಷ್ಟ: ಸಿದ್ದರಾಮಯ್ಯ

|

Updated on: Mar 11, 2023 | 1:18 PM

ಅವರ ಸಾವು ಅದರಲ್ಲೂ ಚುನಾವಣೆ ಹತ್ತಿರ ಬಂದಿರುವಾಗ ಕಣ್ಮರೆಯಾಗಿರುವುದು ಪಕ್ಷದ ಮೇಲೆ ದೊಡ್ಡ ಪ್ರಭಾವ ಬೀರಿದೆ. ಹಳೆ ಮೈಸೂರು ಭಾಗದಲ್ಲಿ ಅವರು ಪ್ರಮುಖ ದಲಿತ ನಾಯಕರಾಗಿದ್ದರು ಎಂದು ಸಿದ್ದರಾಮಯ್ಯ ಭಾವುಕರಾಗಿ ಹೇಳಿದರು

ದಾವಣಗೆರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ (R Dhruvanarayana) ಅವರ ಸಾವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ಬಹುದೊಡ್ಡ ನಷ್ಟ ಎಂದು ಸಿದ್ದರಾಮಯ್ಯ (Siddaramaiah) ದಾವಣಗೆರೆಯಲ್ಲಿ ಹೇಳಿದರು. ಧ್ರುವನಾರಾಯಣ ಬಹಳ ಚಿಕ್ಕ ವಯಸ್ಸಿನವರಾಗಿದ್ದರು, ಖಂಡಿತ ಸಾಯುವ ವಯಸ್ಸಲ್ಲ, ಪಾದರಸದಂತೆ ಕ್ಷೇತ್ರದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಓಡಾಡಿಕೊಂಡಿದ್ದರು ಎಂದು ಹೇಳಿದ ಸಿದ್ದರಾಮಯ್ಯ ಅವರಿಗೆ ಯಾವುದೇ ಕಾಯಿಲೆ ಕೂಡ ಇರಲಿಲ್ಲ ಎಂದರು. ಅವರ ಸಾವು ಅದರಲ್ಲೂ ಚುನಾವಣೆ ಹತ್ತಿರ ಬಂದಿರುವಾಗ ಕಣ್ಮರೆಯಾಗಿರುವುದು ಪಕ್ಷದ ಮೇಲೆ ದೊಡ್ಡ ಪ್ರಭಾವ ಬೀರಿದೆ. ಹಳೆ ಮೈಸೂರು ಭಾಗದಲ್ಲಿ ಅವರು ಪ್ರಮುಖ ದಲಿತ ನಾಯಕರಾಗಿದ್ದರು (Dalit leader) ಎಂದು ಸಿದ್ದರಾಮಯ್ಯ ಭಾವುಕರಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 11, 2023 01:18 PM