ಧ್ರುವನಾರಾಯಣ ವಯಸ್ಸಲ್ಲಿ ಕಿರಿಯರಾಗಿದ್ದರೂ ನನ್ನ ಉತ್ತಮ ಸ್ನೇಹಿತ ಮತ್ತು ಪ್ರಾಮಾಣಿಕ ನಾಯಕರಾಗಿದ್ದರು: ಬಿಎಸ್ ಯಡಿಯೂರಪ್ಪ

ಧ್ರುವನಾರಾಯಣ ವಯಸ್ಸಲ್ಲಿ ಕಿರಿಯರಾಗಿದ್ದರೂ ನನ್ನ ಉತ್ತಮ ಸ್ನೇಹಿತ ಮತ್ತು ಪ್ರಾಮಾಣಿಕ ನಾಯಕರಾಗಿದ್ದರು: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 11, 2023 | 2:37 PM

ಬೆಳಗ್ಗೆಯೇ ಕುಟುಂಬಕ್ಕೆ ಶೋಕ ಸಂದೇಶ ಕಳಿಸಿದ್ದೇನೆ, ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಯಡಿಯೂರಪ್ಪ ಹೇಳಿದರು.

ರಾಯಚೂರು: ಶನಿವಾರ ಬೆಳಗ್ಗೆ ತೀವ್ರಸ್ವರೂಪದ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಮಾಜಿ ಸಂಸದ ಆರ್ ಧ್ರುವನಾರಾಯಣ (R Dhruvanarayana) ಅಜಾತಶತ್ರುವಾಗಿದ್ದರೆನ್ನುವುದು ನಿರ್ವಿವಾದಿತ. ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಇಂದು ರಾಯಚೂರಲ್ಲಿ ಕಾಂಗ್ರೆಸ್ ನಾಯಕನ ಸಾವಿಗೆ ಶೋಕ ವ್ಯಕ್ತ ಪಡಿಸಿದರು. ತನ್ನ ಉತ್ತಮ ಸ್ನೇಹಿತರಾಗಿದ್ದ ಧ್ರುವನಾರಾಯಣ ಒಬ್ಬ ಪ್ರಾಮಾಣಿಕ ಮತ್ತು ಪ್ರಭಾವಿ ನಾಯಕರಾಗಿದ್ದರು (influential leader) ಎಂದು ಬಿಎಸ್ ವೈ ಹೇಳಿದರು. ಬೆಳಗ್ಗೆಯೇ ಕುಟುಂಬಕ್ಕೆ ಶೋಕ ಸಂದೇಶ ಕಳಿಸಿದ್ದೇನೆ, ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಯಡಿಯೂರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 11, 2023 02:37 PM