ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಘೋಶಿಸಿದ ಹಿನ್ನೆಲೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದಲ್ಲಿನ ಲಂಕೇಶ್ ರಂಗ ಮಂದಿರದಿಂದ ಸುಮಲತಾರ ಫೋಟೋ ತೆರವುಗೊಳಿಸಲಾಗಿದೆ. ಬಿದರಕೆರೆ ಗ್ರಾಮದಲ್ಲಿ ದಿವಂಗತ ನಟ ಅಂಬರೀಶ್ರವರ ಅನುದಾನದಿಂದ ರಂಗಮಂದಿರ ನಿರ್ಮಾಣವಾಗಿತ್ತು. ರಂಗಮಂದಿರದಲ್ಲಿ ವರನಟ ಡಾ ರಾಜ್ ಕುಮಾರ್, ದಿವಂಗತ ಅಂಬರೀಶ್ ಹಾಗೂ ಸುಮಲತಾರ ಫೋಟೊ ಅಳವಡಿಸಲಾಗಿತ್ತು. ನಿನ್ನೆ (ಮಾ.10) ಬಿಜೆಪಿಗೆ ತನ್ನ ಬೆಂಬಲ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಫೋಟೋ ತೆರವು ಮಾಡಲಾಗಿದೆ.