ಮೈಸೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷ ಮತ್ತು ಚಾಮರಾಜನಗರವನ್ನು ಎರಡು ಬಾರಿ ಲೋಕಸಭೆಯಲ್ಲಿ (MP) ಪ್ರತಿನಿಧಿಸಿದ್ದ ಆರ್ ಧ್ರುವನಾರಾಯಣ (R Dhruva Narayan) ಅವರು ಇಂದು ಬೆಳಗ್ಗೆ ಭಾರೀ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಎರಡು ಬಾರಿ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದ ಅವರು ಈ ಬಾರಿಯ ವಿಧಾನಸಭಾ ಚುನಾವಣೆಗೆ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುವ ತಯಾರಿ ನಡೆಸಿದ್ದರು. ಧ್ರುವನಾರಾಯಣ ಅವರನ್ನು ದಾಖಲಿಸಲಾಗಿದ್ದ ನಗರದ ಆಸ್ಪತ್ರೆಯೊಂದರ ಮುಂದೆ ನೆರೆದ ಅಭಿಮಾನಿಗಳು ಮತ್ತು ಬೆಂಬಲಿಗರು ಕಣ್ಣೀರಿಡುತ್ತಿದ್ದರು. ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಸಹ ಆಸ್ಪತ್ರೆಗೆ ಧಾವಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ