‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಸೀಸನ್ ಚಪ್ಪಾಳೆ ಬದಲಿಸಿದ ಬಗ್ಗೆ ಧ್ರುವಂತ್ ಮಾತು

Edited By:

Updated on: Jan 20, 2026 | 8:33 AM

Dhruvanth About Season Chappale: ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಧ್ರುವಂತ್ ಅವರು ಈಗ ಮೊದಲ ಬಾರಿಗೆ ಮಾತನಾಡಿದ್ದಾರೆ. ಅವರು ಬಿಗ್ ಬಾಸ್ ಅಲ್ಲಿ ಮಧ್ಯವಾರವೇ ಹೊರ ಹೋಗಿದ್ದರು. ಈ ಕಾರಣದಿಂದ ಅವರು ಮಾತಿಗೆ ಸಿಕ್ಕಿರಲಿಲ್ಲ. ಆ ಬಗ್ಗೆ ಅವರು ಏನ್ ಹೇಳ್ತಾರೆ ನೋಡಿ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ ಅವರು ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಸೀಸನ್ ಚಪ್ಪಾಳೆಯನ್ನು ಸುದೀಪ್ ನೀಡಿದರು. ನಂತರ ಇದಕ್ಕೆ ಟೀಕೆ ಸಿಕ್ಕಿದ್ದರಿಂದ ವಾರದ ಚಪ್ಪಾಳೆ ಎಂದು ಕಲರ್ಸ್ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಬದಲಾಯಿಸಿತ್ತು. ಈ ಬಗ್ಗೆ ಧ್ರುವಂತ್ ಮಾತನಾಡಿದ್ದಾರೆ. ‘ಟಿಆರ್​​ಪಿ ತರೋರು ಒಬ್ಬರಾದರೆ, ಕಪ್ ಗೆಲ್ಲೋರು ಮತ್ತೊಬ್ಬರಾಗಿರ್ತಾರೆ. ಕಪ್ ಗೆಲ್ಲದೆ ಇರಬಹುದು ಆದರೆ, ಶೋ ಗೆದ್ದಿದ್ದು ನಾನು’ ಎಂದು ಧ್ರುವಂತ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 20, 2026 08:32 AM