ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯೇ ಮತ್ತೆ ಮದುವೆ ಸಿನಿಮಾದ ಕತೆಯೇ?

|

Updated on: Jun 03, 2023 | 10:27 PM

Naresh-Pavitra Lokesh: ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟಿಸಿರುವ ಮತ್ತೆ ಮದುವೆ ಸಿನಿಮಾ ಅವರ ಪ್ರೇಮಕತೆಯನ್ನು ಆಧರಿಸಿದ ಸಿನಿಮಾವೇ ಅಥವಾ ಕಲ್ಪಿತ ಕತೆಯೇ? ಅವರೇ ಉತ್ತರ ನೀಡಿದ್ದಾರೆ.

ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಸಂಬಂಧ ಕಳೆದ ವರ್ಷ ಬಹುವಾಗಿ ಸುದ್ದಿಯಾಗಿತ್ತು. ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ, ನರೇಶ್ ಹಾಗೂ ಪವಿತ್ರಾರದ್ದು ಅಕ್ರಮ ಸಂಬಂಧ ಎಂಬ ಆರೋಪ ಹೊರಿಸಿದ್ದರು. ಆ ಎಲ್ಲ ವಿವಾದಗಳ ಬಳಿಕ ಇದೀಗ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ಮತ್ತೆ ಮದುವೆ ಹೆಸರಿನ ಸಿನಿಮಾ ಮಾಡಿದ್ದು, ಇದು ಇವರದ್ದೇ ಜೀವನದ ಕತೆ ಎನ್ನಲಾಗುತ್ತಿದೆ. ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ಈ ಜೋಡಿಗೆ ಇದೇ ಪ್ರಶ್ನೆ ಎದುರಾಗಿದ್ದು, ಇಬ್ಬರೂ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ