Heavy rains in Kodagu district: ಕೊಡಗು ಜಿಲ್ಲೆಯ ನಾನಾಭಾಗಗಳಲ್ಲಿ ಧಾರಾಕಾರ ಮಳೆ, ಬೇಸತ್ತ ಜನ
ಇದ್ದಕಿದ್ದಂತೆ ಮಳೆ ಧೋ ಅಂತ ಧರೆಗಿಳಿಯಲಾರಂಭಿಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ
ಕೊಡಗು: ರಾಜ್ಯದ ಯಾವ ಭಾಗವನ್ನೂ ಅಕಾಲಿಕ ಮಳೆ (untimely rain) ಬಿಡುತ್ತಿಲ್ಲ ಮಾರಾಯ್ರೇ. ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ಬೆಳಗಾವಿ, ಮೈಸೂರು, ಬೆಂಗಳೂರು-ಹೀಗೆ ಎಲ್ಲೆಡೆ ಮಳೆಯಾಗುತ್ತಿದೆ ಮತ್ತು ಜನ ಮಳೆಯಿಂದ ಬೇಸತ್ತು ಹೋಗುತ್ತಿದ್ದಾರೆ. ಇಲ್ನೋಡಿ, ಕೊಡಗು ಜಿಲ್ಲೆಯಲ್ಲೂ (Kodagu district) ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಜಿಲ್ಲೆಯ ಹಲವಾರು ಭಾಗಗಳಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ (overcast) ವಾತಾವರಣವಿತ್ತು. ಅದರೆ ಮಧ್ಯಾಹ್ನದ ನಂತರ ಮಳೆ ಧಾರಾಕಾರವಾಗಿ ಸುರಿಯಾರಂಭಿಸಿದೆ. ಇದ್ದಕಿದ್ದಂತೆ ಮಳೆ ಧೋ ಅಂತ ಧರೆಗಿಳಿಯಲಾರಂಭಿಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos