ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಇಂದಿನ ಬದಲಾಗುತ್ತಿರುವ ಡಿಜಿಟಲ್ (Digital) ಯುಗದಲ್ಲಿ ಮೊಬೈಲ್ (Mobile), ಟಿವಿ (Tv), ಓಟಿಟಿ (Ott), ವೆಬ್‌ಸೀರಿಸ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಈ ತಂತ್ರಜ್ಞಾನ ಅವಲಂಬನೆ ಹೆಚ್ಚಾದಂತೆ ಮಕ್ಕಳ ಬಾಲ್ಯದ ಆಟಗಳು, ಕುಟುಂಬದ ಒಡನಾಟ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳು ನಿಧಾನವಾಗಿ ಮರೆಯಾಗುತ್ತಿವೆ. ಮಕ್ಕಳು ಮೊಬೈಲ್‌ಗಳಲ್ಲೇ ಮುಳುಗಿದರೆ, ವಯಸ್ಕರು ಕೂಡಾ ಟಿವಿ, ವಿಡಿಯೋ ಗೇಮ್ಸ್, ಓಟಿಟಿ, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ನಮ್ಮ ಆಚಾರ-ವಿಚಾರ, ಸಂಸ್ಕೃತಿಯೇ ಪತನದ ಅಂಚಿಗೆ ತಲುಪಿದೆ ಎಂಬ ಆತಂಕ ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ (Belagavi) ಹಲಗಾ ಗ್ರಾಮ ಡಿಜಿಟಲ್ ಆಫ್ ಪ್ರಯೋಗಕ್ಕೆ ಮುಂದಾಗಿದೆ.
ಬೆಳಗಾವಿ, (ಡಿಸೆಂಬರ್ 21): ಇಂದಿನ ಬದಲಾಗುತ್ತಿರುವ ಡಿಜಿಟಲ್ (Digital) ಯುಗದಲ್ಲಿ ಮೊಬೈಲ್ (Mobile), ಟಿವಿ (Tv), ಓಟಿಟಿ (Ott), ವೆಬ್‌ಸೀರಿಸ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಈ ತಂತ್ರಜ್ಞಾನ ಅವಲಂಬನೆ ಹೆಚ್ಚಾದಂತೆ ಮಕ್ಕಳ ಬಾಲ್ಯದ ಆಟಗಳು, ಕುಟುಂಬದ ಒಡನಾಟ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳು ನಿಧಾನವಾಗಿ ಮರೆಯಾಗುತ್ತಿವೆ. ಮಕ್ಕಳು ಮೊಬೈಲ್‌ಗಳಲ್ಲೇ ಮುಳುಗಿದರೆ, ವಯಸ್ಕರು ಕೂಡಾ ಟಿವಿ, ವಿಡಿಯೋ ಗೇಮ್ಸ್, ಓಟಿಟಿ, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ನಮ್ಮ ಆಚಾರ-ವಿಚಾರ, ಸಂಸ್ಕೃತಿಯೇ ಪತನದ ಅಂಚಿಗೆ ತಲುಪಿದೆ ಎಂಬ ಆತಂಕ ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ (Belagavi) ಹಲಗಾ ಗ್ರಾಮ ಡಿಜಿಟಲ್ ಆಫ್ ಪ್ರಯೋಗಕ್ಕೆ ಮುಂದಾಗಿದೆ.
ಹೌದು..ಈ ಡಿಜಿಟಲ್ ಆಕ್ರಮಣಕ್ಕೆ ಪ್ರತಿರೋಧವಾಗಿ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಲಗಾ ಗ್ರಾಮ ಒಂದು ವಿಭಿನ್ನ ಹಾಗೂ ಶ್ಲಾಘನೀಯ ಪ್ರಯೋಗಕ್ಕೆ ಮುಂದಾಗಿದೆ. ಮಹಾರಾಷ್ಟ್ರದ ಒಂದು ಗ್ರಾಮದಲ್ಲಿ ಯಶಸ್ವಿಯಾಗಿ ಜಾರಿಗೊಂಡಿದ್ದ ಮಾದರಿಯನ್ನು ಅನುಸರಿಸಿ, ಹಲಗಾ ಗ್ರಾಮದಲ್ಲಿ ನಿತ್ಯ ಎರಡು ಗಂಟೆಗಳ ‘ಡಿಜಿಟಲ್ ಆಫ್’ ಪ್ರಯೋಗ ಆರಂಭಿಸಲಾಗಿದೆ. ಈ ಪ್ರಯೋಗವು ಡಿಸೆಂಬರ್ 17ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಹಾಗಾದ್ರೆ, ಏನಿದು ‘ಡಿಜಿಟಲ್ ಆಫ್’ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
