‘ಕಾಟೇರ’ ಹೆಸರು ದರ್ಶನ್ ಸೂಚಿಸಿದ್ದಕ್ಕೆ ಕಾರಣ ಬೇರೆಯೇ ಇದೆ: ಮಹೇಶ್
Kaatera: ‘ಕಾಟೇರ’ ಸಿನಿಮಾದ ಟೈಟಲ್ ವಿವಾದ ಭುಗಿಲೆದ್ದಿದೆ. ನಿರ್ದೇಶಕ ಮಹೇಶ್ ವಿವಾದದ ಬಗ್ಗೆ ಮಾತನಾಡಿದ್ದು, ‘ಕಾಟೇರ’ ಸಿನಿಮಾದ ಟೈಟಲ್ ಅನ್ನು ಸೂಚಿಸಿದ್ದು ನಟ ದರ್ಶನ್, ನಿರ್ದಿಷ್ಟವಾಗಿ ಆ ಹೆಸರನ್ನೇ ದರ್ಶನ್ ಸೂಚಿಸಲಿಕ್ಕೆ ಕಾರಣವೂ ಇದೆ ಎಂದಿದ್ದಾರೆ.
‘ಕಾಟೇರ’ (Kaatera) ಸಿನಿಮಾದ ಟೈಟಲ್ ವಿವಾದ ಉಮಾಪತಿ ಶ್ರೀನಿವಾಸ್ (Umapathy Srinivas) ಹಾಗೂ ದರ್ಶನ್ (Darshan) ಮಧ್ಯೆ ಮತ್ತೊಂದು ಹಂತದ ಮನಸ್ತಾಪಕ್ಕೆ ಕಾರಣವಾಗಿದೆ. ‘ಕಾಟೇರ’ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ‘ಕಾಟೇರ’ ಸಿನಿಮಾದ ಟೈಟಲ್ ತಾವೇ ರಿಜಿಸ್ಟರ್ ಮಾಡಿಸಿದ್ದು ಎಂದು ನಿರ್ದೇಶಕ ಮಹೇಶ್ ಹಾಗೂ ತರುಣ್ ಸುಧೀರ್ ಅವರಿಂದ ಸಾಕ್ಷಿಯನ್ನು ದರ್ಶನ್ ಹೇಳಿಸಿದ್ದಾರೆ. ಕಾರ್ಯಕ್ರಮದ ಬಳಿಕ ಟಿವಿ9 ಜೊತೆ ವಿವಾದದ ಬಗ್ಗೆ ವಿವರವಾಗಿ ನಿರ್ದೇಶಕ ಮಹೇಶ್ ಮಾತಾಡಿದ್ದು, ‘ಕಾಟೇರ’ ಸಿನಿಮಾದ ಟೈಟಲ್ ದರ್ಶನ್ ಅವರದ್ದೇ ಅವರೇ ಹೇಳಿ ಉಮಾಪತಿ ಶ್ರೀನಿವಾಸ್ ಅವರ ಬ್ಯಾನರ್ನಲ್ಲಿ ಅದನ್ನು ರಿಜಿಸ್ಟರ್ ಮಾಡಿಸಿದ್ದರು. ಮಹೇಶ್ ಹೇಳಿರುವಂತೆ, ದರ್ಶನ್ ಅವರ ಬಳಿ ಕುದುರೆಯೊಂದಿತ್ತು, ಆ ಕುದುರೆಯ ಹೆಸರು ‘ಕಾಟೇರ’ ಆ ಕುದುರೆಯ ನೆನಪಿಗಾಗಿ ‘ಕಾಟೇರ’ ಹೆಸರನ್ನು ರಿಜಿಸ್ಟರ್ ಮಾಡಿಸಿದ್ದರಂತೆ ಅದೂ ಉಮಾಪತಿ ಅವರ ಬ್ಯಾನರ್ನಿಂದ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ