‘ಕಾಟೇರ’ ಟೈಟಲ್ ವಿವಾದ, ‘ಸಾಕ್ಷಿ’ ಹೇಳಿದ ನಿರ್ದೇಶಕ ಮಹೇಶ್​ ವಿವಾದದ ಬಗ್ಗೆ ಹೇಳಿದ್ದು ಹೀಗೆ

‘ಕಾಟೇರ’ ಟೈಟಲ್ ವಿವಾದ, ‘ಸಾಕ್ಷಿ’ ಹೇಳಿದ ನಿರ್ದೇಶಕ ಮಹೇಶ್​ ವಿವಾದದ ಬಗ್ಗೆ ಹೇಳಿದ್ದು ಹೀಗೆ

ಮಂಜುನಾಥ ಸಿ.
|

Updated on: Feb 20, 2024 | 10:48 PM

Kaatera: ‘ಕಾಟೇರ’ ಸಿನಿಮಾದ ಟೈಟಲ್ ವಿವಾದದ ಬಗ್ಗೆ ದರ್ಶನ್ ಮಾತನಾಡಿದ್ದು, ವೇದಿಕೆ ಮೇಲೆ ನಿರ್ದೇಶಕ ಮಹೇಶ್ ಅವರಿಂದ ಸಾಕ್ಷಿ ಹೇಳಿಸಿದ್ದಾರೆ. ಬಳಿಕ ಮಹೇಶ್, ವಿವಾದದ ಬಗ್ಗೆ ವಿವರವಾಗಿ ಟಿವಿ9 ಜೊತೆ ಮಾತನಾಡಿದ್ದಾರೆ.

ಕಾಟೇರ’ (Kaatera) ಸಿನಿಮಾದ ಕತೆ ತಾವು ಮಾಡಿಸಿದ್ದು ಎಂದು ಈ ಹಿಂದೆ ಉಮಾಪತಿ ಶ್ರೀನಿವಾಸ್ ಹೇಳಿದ್ದರು. ಸಿನಿಮಾದ ಟೈಟಲ್ ಸಹ ತಮ್ಮ ಬಳಿಯೇ ಇತ್ತೆಂದು ಹೇಳಿದ್ದರು. ‘ಕಾಟೇರ’ ಸಿನಿಮಾದ ಸಕ್ಸಸ್​ ಮೀಟ್​ನಲ್ಲಿ ಈ ಬಗ್ಗೆ ಮಾತನಾಡಿದ ನಟ ದರ್ಶನ್, ‘ಕಾಟೇರ’ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿದ್ದು ತಾನೆಂದು ಆ ಟೈಟಲ್ ಅನ್ನು ‘ಮದಗಜ’ ಟೈಟಲ್​ ಜೊತೆಗೆ ಎಕ್ಸ್​ಚೇಂಜ್ ಮಾಡಿಸಿದ್ದಾಗಿ ಹೇಳಿದರು. ಇದಕ್ಕೆ ನಿರ್ದೇಶಕ ಮಹೇಶ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರಿಂದಲೂ ಸಾಕ್ಷಿಯಾಗಿ ಹೇಳಿಸಿದರು. ಘಟನೆ ಬಳಿಕ ಟಿವಿ9 ಜೊತೆಗೆ ಮಾತನಾಡಿರುವ ನಿರ್ದೇಶಕ ಮಹೇಶ್, ವಿವಾದದ ಕುರಿತಾಗಿ ವಿವರವಾಗಿ ಮಾತನಾಡಿದ್ದಾರೆ. ರಾಮಮೂರ್ತಿ ಅವರ ಬಳಿ ಇದ್ದ ‘ಮದಗಜ’ ಟೈಟಲ್ ಅನ್ನು ಉಮಾಪತಿ ಅವರಿಗೆ ಕೊಡಿಸಿ ಅವರ ಬಳಿ ಇದ್ದ ‘ಕಾಟೇರ’ ಟೈಟಲ್ ಅನ್ನು ರಾಮಮೂರ್ತಿ ಅವರಿಗೆ ಕೊಡಿಸಿದ್ದು ದರ್ಶನ್ ಅವರೇ ಎಂದು ಮಹೇಶ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ