ಖುದ್ದು ವಕೀಲರಾದರೂ ರಾಮನಗರ ವಕೀಲರ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡದಿರುವುದು ಆಶ್ಚರ್ಯ: ಸಿಪಿ ಯೋಗೇಶ್ವರ್
ಖುದ್ದು ಒಬ್ಬ ವಕೀಲರಾಗಿರುವ ಸಿದ್ದರಾಮಯ್ಯ ಕ್ರಮ ತೆಗೆದುಕೊಳ್ಳಲು ಸಿದ್ಧರಿದ್ದರೂ, ರಾಮನಗರ ಡಿಕೆ ಶಿವಕುಮಾರ ಮತ್ತು ಡಿಕೆ ಸುರೇಶ್ ಕಾರ್ಯಕ್ಷೇತ್ರವಾಗಿರುವುದರಿಂದ ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು. ಅವರ ಫಜೀತಿ ತನಗೆ ಅರ್ಥವಾಗುತ್ತದೆ ಎಂದು ಹೇಳಿದ ಯೋಗೇಶ್ವರ್, ಮುಖ್ಯಮಂತ್ರಿಯವರ ವಿಷಯದಲ್ಲಿ ಹೀಗೆ ಹೇಳಬಾರದು, ಆದರೆ ಅಸಲಿಗೆ ಅವರು ಡಿಕೆ ಸಹೋದರರಿಗೆ ಹೆದರುತ್ತಾರೆ, ಯಾಕೆ ಅಂತ ಅವರನ್ನೇ ಕೇಳಬೇಕು ಎಂದರು.
ರಾಮನಗರ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲೆಯ ವಕೀಲರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ನಿನ್ನೆ ನಾವು ವರದಿ ಮಾಡಿದ ಹಾಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಪ್ರತಿಭಟನಾ ಸ್ಥಳಕ್ಕೆ ವಕೀಲರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಇಂದು ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ (CP Yogeshwar) ವಕೀಲರ ಜೊತೆ ಪ್ರತಿಭಟನೆ ಕುಳಿತು ಐಜೂರು ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನನ್ನು ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಯೋಗೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಹೇಳಿದರು. ಖುದ್ದು ಒಬ್ಬ ವಕೀಲರಾಗಿರುವ ಸಿದ್ದರಾಮಯ್ಯ ಕ್ರಮ ತೆಗೆದುಕೊಳ್ಳಲು ಸಿದ್ಧರಿದ್ದರೂ, ರಾಮನಗರ ಡಿಕೆ ಶಿವಕುಮಾರ ಮತ್ತು ಡಿಕೆ ಸುರೇಶ್ ಕಾರ್ಯಕ್ಷೇತ್ರವಾಗಿರುವುದರಿಂದ ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು. ಅವರ ಫಜೀತಿ ತನಗೆ ಅರ್ಥವಾಗುತ್ತದೆ ಎಂದು ಹೇಳಿದ ಯೋಗೇಶ್ವರ್, ಮುಖ್ಯಮಂತ್ರಿಯವರ ವಿಷಯದಲ್ಲಿ ಹೀಗೆ ಹೇಳಬಾರದು, ಆದರೆ ಅಸಲಿಗೆ ಅವರು ಡಿಕೆ ಸಹೋದರರಿಗೆ ಹೆದರುತ್ತಾರೆ, ಯಾಕೆ ಅಂತ ಅವರನ್ನೇ ಕೇಳಬೇಕು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ