ರಾಜ್ಯ ಕಾಂಗ್ರೆಸ್ ಸರ್ಕಾರದ ಪತನ – ಈ ಬಾರಿ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ರಿಂದ ಭವಿಷ್ಯ, ಗಡುವು ಯಾವಾಗ?
ರಾಮನಗರದಿಂದಲೇ ಸರ್ಕಾರ ಪತನದ ಬಗ್ಗೆ ಬ್ಯಾಕ್ ಟು ಬ್ಯಾಕ್ ಬಾಂಬ್ ಸಿಡಿದಿದೆ. ಕುಮಾರಸ್ವಾಮಿ ಬಳಿಕ ಸಿಪಿ ಯೋಗೇಶ್ವರ್, ಸರ್ಕಾರದ ಮುಳುಗುವ ಬಾಂಬ್ ಹಾಕಿರೋದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೀಡುಮಾಡಿದೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಸರ್ಕಾರದ ಪತನದ ಬಾಂಬ್ ಸಿಡಿಸಿರುವುದರ ಬನ್ನಿಗೇ ಬಿಜೆಪಿ ನಾಯಕ ಯೋಗೇಶ್ವರ್ ಅವರೂ ಸಹ ಅಂತಹುದೇ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮುಳುಗುತ್ತೆ, ಪತನವಾಗುತ್ತೆ.. ನನ್ನನ್ನು 14 ತಿಂಗಳಿನಲ್ಲಿ ಕೆಳಗಿಳಿಸಿದಂತೆ ಈಗ ಈ ಸರ್ಕಾರವೂ ಉರುಳುತ್ತೆ ಅಂತ ಟಿವಿ ನೈನ್ ವಿಶೇಷ ಸಂದರ್ಶನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದರು. ಇದೀಗ ಸಂಕ್ರಾಂತಿ ವೇಳೆಗೆ ರಾಜ್ಯ ಸರ್ಕಾರ ಪತನವಾಗಲಿದೆ ಅನ್ನೋ ಧಾಟಿಯಲ್ಲೇ ಬಿಜೆಪಿ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಸಹ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಹೊಗೆಯಾಡುತ್ತಿದೆ. ಇದು ಸರ್ಕಾರದ ಪತನಕ್ಕೆ ದಾರಿ ಮಾಡಿಕೊಡುತ್ತೆ ಅನ್ನೋ ಅರ್ಥದಲ್ಲೇ ಯೋಗೇಶ್ವರ್ ಬಾಂಬ್ ಸಿಡಿಸಿದ್ದಾರೆ. ಇದಕ್ಕೂ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸರ್ಕಾರ ಪತನದ ಭವಿಷ್ಯ ನುಡಿದಿದ್ದರು.
ರಾಮನಗರದಿಂದಲೇ ಸರ್ಕಾರ ಪತನದ ಬಗ್ಗೆ ಬ್ಯಾಕ್ ಟು ಬ್ಯಾಕ್ ಬಾಂಬ್ ಸಿಡಿದಿದೆ. ಕುಮಾರಸ್ವಾಮಿ ಬಳಿಕ ಸಿಪಿ ಯೋಗೇಶ್ವರ್, ಸರ್ಕಾರದ ಮುಳುಗುವ ಬಾಂಬ್ ಹಾಕಿರೋದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೀಡುಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Oct 02, 2023 08:39 PM
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
