ಹಾಡಿನ ಒಂದು ಸಾಲಿನಿಂದಲೇ ಶುರುವಾಗಿದ್ದು ‘ದೂರ ತೀರ ಯಾನ’ ಸಿನಿಮಾ: ಮಂಸೋರೆ

Updated on: Jun 10, 2025 | 10:55 PM

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡೈರೆಕ್ಟರ್ ಮಂಸೋರೆ ನಿರ್ದೇಶನ ಮಾಡಿರುವ ‘ದೂರ ತೀರ ಯಾನ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 11ರಂದು ಸಿನಿಮಾ ತೆರೆಕಾಣಲಿದೆ. ಈ ಸಿನಿಮಾದ ಟೈಟಲ್ ಸಾಂಗ್ ಇಂದು (ಜೂನ್ 10) ಬಿಡುಗಡೆ ಆಗಿದೆ. ಈ ವೇಳೆ ಮಂಸೋರೆ ಅವರು ಸಿನಿಮಾ ಬಗ್ಗೆ ಮಾತನಾಡಿದರು.

ಮಂಸೋರೆ ನಿರ್ದೇಶನ ಮಾಡಿರುವ ದೂರ ತೀರ ಯಾನ’ (Doora Theera Yaana) ಸಿನಿಮಾ ಬಿಡುಗಡೆ ರೆಡಿಯಾಗಿದೆ. ಜುಲೈ 11ರಂದು ಚಿತ್ರ ತೆರೆಕಾಣಲಿದೆ. ಈ ಸಿನಿಮಾದ ಟೈಟಲ್ ಸಾಂಗ್ ಇಂದು (ಜೂನ್ 10) ಬಿಡುಗಡೆ ಆಗಿದೆ. ಈ ವೇಳೆ ಮಂಸೋರೆ (Director Mansore) ಅವರು ಸಿನಿಮಾ ಬಗ್ಗೆ ಮಾತನಾಡಿದರು. ಚಿತ್ರ ಶುರುವಾಗಲು ಕಾರಣ ಏನು ಎಂಬುದನ್ನು ವಿವರಿಸಿದರು. ‘ಸಿನಿಮಾ ಶುರುವಾಗಲು ಈ ಹಾಡಿನಲ್ಲಿ ಬರುವ ‘ಮುಗಿಯದು ನಮ್ಮ ಪಯಣ’ ಎಂಬ ಸಾಲು ಮುಖ್ಯ ಕಾರಣ. ಆ ಸಾಲನ್ನು ಕೊಟ್ಟಿದ್ದೇ ನಿರ್ಮಾಪಕ ದೇವರಾಜ್ ಅವರು. ಕಳೆದ ವರ್ಷ ನಾನು ಸ್ವಲ್ಪ ಕುಗ್ಗಿದ್ದಾಗ, ಮುಂದೇನು ಅಂತ ಬ್ಲ್ಯಾಂಕ್ ಆಗಿದ್ದೆ. ಆದ ನಿರ್ಮಾಪಕರು ಬಂದು ನಮ್ಮ ಜರ್ನಿ ಇಲ್ಲಿಗೆ ಮುಗಿಯಲ್ಲ ಅಂತ ಹೇಳಿದರು. ಅವರು ಹೇಳಿದ ಆ ಮಾತಿನಿಂದ ಈ ಸಿನಿಮಾ ಶುರುವಾಯಿತು’ ಎಂದಿದ್ದಾರೆ ಮಂಸೋರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More