ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಬಿಡುಗಡೆಯಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ನಾಗಶೇಖರ್ಗೆ ಇಂದು ಕಾರು ಚಾಲನೆ ಮಾಡುವಾಗ ಆಯತಪ್ಪಿ ಫುಟ್ಪಾತ್ ಮೇಲೆ ಕಾರು ಹರಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ ಕಾರು ಸ್ವಲ್ಪ ಜಖಂ ಆಗಿದೆ. ಇಲ್ಲಿದೆ ವಿಡಿಯೋ.
‘ಸಂಜು ವೆಡ್ಸ್ ಗೀತಾ’ ಸೇರಿದಂತೆ ಕೆಲವು ಹಿಟ್ ಸಿನಿಮಾಗಳನ್ನು ನೀಡಿರುವ ನಟ, ನಿರ್ದೇಶಕ ನಾಗಶೇಖರ್ ಅವರ ಕಾರು ಇಂದು (ಸೆಪ್ಟೆಂಬರ್ 06) ಬೆಂಗಳೂರಿನಲ್ಲಿ ಅಪಘಾತಕ್ಕೆ ಈಡಾಗಿದೆ. ನಾಗಶೇಖರ್ ಚಾಲನೆ ಮಾಡುತ್ತಿದ್ದ ಸೆಡಾನ್ ಕಾರು ಆಯತಪ್ಪಿ ಫುಟ್ಪಾತ್ ಮೇಲೆ ಹರಿದು ಫುಟ್ತಾಪ್ನಲ್ಲಿದ್ದ ಮರಕ್ಕೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ, ಸ್ವತಃ ನಾಗಶೇಖರ್ಗೆ ಸಹ ಯಾವುದೇ ಗಾಯಗಳಾಗಿಲ್ಲ. ಆದರೆ ಕಾರು ಭಾಗಷಃ ಜಖಂ ಆಗಿದೆ. ಕಾರಿನ ಮುಂಭಾಗಕ್ಕೆ ತೀವ್ರ ಏಟಾಗಿದೆ. ಕಾರಿನ ಬದಿಯಲ್ಲಿಯೂ ಸಹ ಏಟಾಗಿದೆ. ಅಪಘಾತವಾದ ಸ್ಥಳದಲ್ಲಿ ಇದ್ದ ಕೆಲವು ಸ್ಥಳೀಯರು ನಿರ್ದೇಶಕ ನಾಗಶೇಖರ್ಗೆ ಸಹಾಯ ಮಾಡಿದ್ದಾರೆ. ಸಂಚಾರಿ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ, ಸಹಾಯ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ