ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ

ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ

ಮದನ್​ ಕುಮಾರ್​
|

Updated on: Sep 06, 2024 | 10:42 PM

ಚಾರ್ಜ್​​ಶೀಟ್​ ಸಲ್ಲಿಕೆ ಆದ ಬಳಿಕ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದ ಅನೇಕ ವಿವರಗಳು ಹೊರಬರುತ್ತಿವೆ. ಶಾಕಿಂಗ್​ ವಿಡಿಯೋ ಮತ್ತು ಫೋಟೋಗಳು ಕೂಡ ಬಹಿರಂಗ ಆಗಿವೆ. ಈ ಪ್ರಕರಣದಲ್ಲಿ ದರ್ಶನ್​, ಪವಿತ್ರಾ ಗೌಡ ಮುಂತಾದ ಆರೋಪಿಗಳಿಗೆ ಆತಂಕ ಹೆಚ್ಚಾಗಿದೆ. ಬೆಂಗಳೂರು ಪೊಲೀಸರಿಗೆ ನೂರಾರು ಬಗೆಯ ಸಾಕ್ಷಿಗಳು ಸಿಕ್ಕಿವೆ. ಸಿಸಿಟಿವಿ ದೃಶ್ಯಗಳ ಕೂಡ ಲಭ್ಯವಾಗಿವೆ.

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಯಿತು. ಹತ್ಯೆ ನಡೆದ ಬಳಿಕ ಆತನ ಶವವನ್ನು ರಾಜಕಾಲುವೆಗೆ ಎಸೆಯಲಾಯಿತು. ಶವ ಎಸೆದು ತೆರಳಿದ ಆರೋಪಿಗಳ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ದರ್ಶನ್​, ವಿನಯ್​, ಪವಿತ್ರಾ ಗೌಡ ಮುಂತಾದವರು ಈ ಕೇಸ್​ನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಸಾಕ್ಷಿಗಳು ಬಲವಾಗಿ ಇರುವುದರಿಂದ ಆರೋಪಿಗಳಿಗೆ ನಡುಕ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.