ಯತ್ನಾಳ್ಗೆ ನೋಟೀಸ್ ನೀಡಲಾಗಿದೆ, ವಕ್ಫ್ ವಿರುದ್ಧ ಹೋರಾಡುತ್ತಿರುವವರಿಗಲ್ಲ: ಕುಮಾರ ಬಂಗಾರಪ್ಪ
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಮಾಡಿದ ಹೋರಾಟದ ಮಧ್ಯಂತರ ವರದಿಯನ್ನು ಸಲ್ಲಿಸಲು ಇಂದು ಯತ್ನಾಳ್ ಮತ್ತು ಅವರ ತಂಡದ ಕೆಲ ಸದಸ್ಯರು ದೆಹಲಿಗೆ ತೆರಳಲಿದ್ದಾರೆ. ಶಿಸ್ತು ಸಮಿತಿ ನೀಡಿದ ನೋಟೀಸ್ಗೆ ಯತ್ನಾಳ್ ದೆಹಲಿಯಲ್ಲೇ ಉತ್ತರ ನೀಡಬಹುದು.
ಬೆಳಗಾವಿ: ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ಗೆ ಪಕ್ಷದ ಕೇಂದ್ರೀಯ ಶಿಸ್ತು ಪಾಲನಾ ಸಮಿತಿ ನೋಟೀಸ್ ನೀಡಿರುವುದು ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಬೆಳಗಾವಿಯಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಯತ್ನಾಳ್ ಬಣದ ಕುಮಾರ ಬಂಗಾರಪ್ಪ, ಸಮಿತಿಯು ಕೇವಲ ಯತ್ನಾಳ್ ಅವರಿಗೆ ಮಾತ್ರ ನೋಟೀಸ್ ನೀಡಿದೆ ಮತ್ತು ಅವರು ಅದಕ್ಕೆ ಉತ್ತರಿಸಲಿದ್ದಾರೆ, ವಕ್ಫ್ ಬೋರ್ಡ್ ವಿರುದ್ಧ ಹೋರಾಡುತ್ತಿರುವ ಬಿಜೆಪಿ ಮುಖಂಡರಿಗೆ ನೋಟೀಸ್ ನೀಡಿಲ್ಲ, ಹಾಗಾಗಿ ಹೋರಾಟ ಮತ್ತು ನೋಟೀಸ್ ನಡುವೆ ಸಂಬಂಧವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ಶಿಸ್ತು ಸಮಿತಿ ನೋಟಿಸ್: ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ