ಉಡುಪಿ ಸಾಮೂಹಿಕ ಹತ್ಯೆ; ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ರಿಂದ ಕುಟುಂಬಕ್ಕೆ ಸಾಂತ್ವನ

|

Updated on: Nov 17, 2023 | 2:55 PM

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮನೆಯ ನೂರ್ ಮೊಹಮ್ಮದ್ ದುಬೈಯಲ್ಲಿ ಕೆಲಸ ಮಾಡುತ್ತಾರೆ ಮತ್ತು ವಿಷಯ ಗೊತ್ತಾದ ಬಳಿಕವೇ ಅವರು ಉಡುಪಿಗೆ ಧಾವಿಸಿದ್ದು. ಅವರ ಪಕ್ಕದಲ್ಲಿ ಕುಳಿತಿರುವ ಮಗ ಬೆಂಗಳೂರಲ್ಲಿ ಕೆಲಸ ಮಾಡುತ್ತಾನೆ. ಕುಟುಂಬಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಭರವಸೆಯನ್ನು ಸಚಿವೆ ಹೆಬ್ಬಾಳ್ಕರ್ ನೀಡಿದರು.

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಇಂದು ನಗರದ ನೇಜಾರುನಲ್ಲಿ ರವಿವಾರ ಬೆಳಗ್ಗೆ ವಿಕೃತ ಮನಸ್ಥಿತಿಯ ವ್ಯಕ್ತಿಯೊಬ್ಬನಿಂದ ಒಂದೇ ಕುಟುಂಬದ ನಾಲ್ವರ ಹತ್ಯೆಯಾದ ಮನೆಗೆ ಭೇಟಿ ನೀಡಿ ಸದಸ್ಯರಿಗೆ ಸಾಂತ್ವನ ಹೇಳಿದರು. ಆರೋಪಿತ ಹಂತಕ ಪ್ರವೀಣ್ ಚೌಗುಲೆಯನ್ನು (Praveen Chougule) ಉಡುಪಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಮತ್ತು ವಿಚಾರಣೆ ವೇಳೆಯಲ್ಲಿ ಅವನು ತಪ್ಪೊಪ್ಪಿಕೊಂಡಿದ್ದಾನೆ. ಸಚಿವೆ ಕುಟುಂಬಸ್ಥರೊಂದಿಗೆ ಮಾತಾಡುವಾಗ ನೆರೆಹೊರೆಯ ಜನ, ಕುಟುಂಬದ ಸ್ನೇಹಿತರು ಮತ್ತು ಬಂಧುಗಳು ಸಹ ಸೇರಿದ್ದರು. ಪತ್ನಿ ಹಸೀನಾ, ಮಕ್ಕಳಾದ ಅಫ್ನಾನ್, ಐಜಾನ್ ಮತ್ತು ಆಸಿಮ್ ರನ್ನು ಕಳೆದುಕೊಂಡು ಕಂಗಾಲಾಗಿರುವ ಮನೆಯ ಯಜಮಾನ ನೂರ್ ಮೊಹಮ್ಮದ್ (Noor Mohammad) ಮತ್ತು ಹತ್ಯೆ ನಡೆದ ಸಂದರ್ಭದಲ್ಲಿ ಬೆಂಗಳೂರಲ್ಲಿದ್ದ ಅವರ ಮಗ ಸಚಿವೆಯೊಂದಿಗೆ ದುಃಖ ತೋಡಿಕೊಳ್ಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಹುದು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮನೆಯ ನೂರ್ ಮೊಹಮ್ಮದ್ ದುಬೈಯಲ್ಲಿ ಕೆಲಸ ಮಾಡುತ್ತಾರೆ ಮತ್ತು ವಿಷಯ ಗೊತ್ತಾದ ಬಳಿಕವೇ ಅವರು ಉಡುಪಿಗೆ ಧಾವಿಸಿದ್ದು. ಅವರ ಪಕ್ಕದಲ್ಲಿ ಕುಳಿತಿರುವ ಮಗ ಬೆಂಗಳೂರಲ್ಲಿ ಕೆಲಸ ಮಾಡುತ್ತಾನೆ. ಕುಟುಂಬಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಭರವಸೆಯನ್ನು ಸಚಿವೆ ಹೆಬ್ಬಾಳ್ಕರ್ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on