ಸಂಸದ ದೇವೇಂದ್ರಪ್ಪ ಜೊತೆ ಸಂತ್ರಸ್ತೆ ಮಾತಾಡಿರುವ ಆಡಿಯೋ ಬಹಿರಂಗ, ಸಂಸದರಿಂದ ವಿಷಯ ತನಗೆ ಸಂಬಂಧಿಸಿದ್ದಲ್ಲ ಎಂಬ ಧೋರಣೆ!

ಸಂಸದ ದೇವೇಂದ್ರಪ್ಪ ಜೊತೆ ಸಂತ್ರಸ್ತೆ ಮಾತಾಡಿರುವ ಆಡಿಯೋ ಬಹಿರಂಗ, ಸಂಸದರಿಂದ ವಿಷಯ ತನಗೆ ಸಂಬಂಧಿಸಿದ್ದಲ್ಲ ಎಂಬ ಧೋರಣೆ!

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 17, 2023 | 2:02 PM

ದೇವೇಂದ್ರಪ್ಪ ಒಮ್ಮೆ ಆಕೆಯ ವಿಷಯದಲ್ಲಿ ಸಹಾನುಭೂತಿ ಪ್ರಕಟಿಸಿದರೆ ಮತ್ತೊಮ್ಮೆ, ಹೀಗೆ ಎಷ್ಟು ಜನಕ್ಕೆ ಪೋನ್ ಮಾಡಿದ್ದೀಯಾ ಅಂತ ಕೇಳುವ ಮೂಲಕ ಆಕೆ ಮತ್ತು ಮಹಿಳಾ ಸಮುದಾಯಕ್ಕೆ ಅವಮಾನವಾಗುವ ಹಾಗೆ ಮಾತಾಡುತ್ತಾರೆ. ಯುವತಿ ಹೇಳೋದನ್ನು ಕೇಳಿಸಿಕೊಳ್ಳೋ ವ್ಯವಧಾನ ಅವರು ತೋರುವುದಿಲ್ಲ.

ಬೆಂಗಳೂರು: ಬಳ್ಳಾರಿಯ ಬಿಜೆಪಿ ಸಂಸದ ವೈ ದೇವೇಂದ್ರಪ್ಪರ (Y Devendrappa) ಮಗ ರಂಗನಾಥ್ (Ranganath) ನಿಂದ ಮೋಸ ಹೋಗಿರುವುದಾಗಿ ಆರೋಪಿಸಿರುವ ಯುವತಿ ಸಂಸದರೊಂದಿಗೂ ಮಾತಾಡಿದ್ದು ಈ ಆಡಿಯೋ ಕ್ಲಿಪ್ ಸಹ ಮಾಧ್ಯಮಗಳಿಗೆ ಲಭ್ಯವಾಗಿದೆ. ಅವರಿಬ್ಬರ ನಡುವಿನ ಸಂಭಾಷಣೆ (conversation) ಕೇಳುತ್ತಿದ್ದರೆ ಸಂಸದರಿಗೆ ವಿಷಯ ಮೊದಲೇ ಗೊತ್ತಿತ್ತು ಅಥವಾ ಇದು ಅವರ ಮಗನ ಮೊದಲ ಪ್ರಕರಣವೇನೂ ಅಲ್ಲ ಅನ್ನೋ ಥರ ಭಾಸವಾಗುತ್ತದೆ ಒಂದು ಹಂತದಲ್ಲಿ ಅವರು ಪ್ರಕರಣ ಮತ್ತು ತನ್ನ ನಡುವೆ ಯಾವುದೇ ಸಂಬಂಧ ಇಲ್ಲ ಎಂಬ ಧಾಟಿಯಲ್ಲಿ ಮಾತಾಡುತ್ತಾರೆ. ಪೂರ್ತಿ ತಪ್ಪು ಸಂತ್ರಸ್ತೆಯದೇ ಅಂತಲೂ ಅವರು ಹೇಳುವ ಹಾಗಿದೆ. ತಮ್ಮ ಮಗ ವಿವಾಹಿತ ಅನ್ನೋದು ಗೊತ್ತಿರಲಿಲ್ಲವೇ ಅಂದ ಯುವತಿಯನ್ನು ಕೇಳಿದಾಗ ಅದನ್ನು ರಂಗನಾಥ್ ತನ್ನಿಂದ ಮುಚ್ಚಿಟ್ಟಿದ್ದರು ಅಂತ ಹೇಳುತ್ತಾಳೆ. ದೇವೇಂದ್ರಪ್ಪ ಒಮ್ಮೆ ಆಕೆಯ ವಿಷಯದಲ್ಲಿ ಸಹಾನುಭೂತಿ ಪ್ರಕಟಿಸಿದರೆ ಮತ್ತೊಮ್ಮೆ, ಹೀಗೆ ಎಷ್ಟು ಜನಕ್ಕೆ ಪೋನ್ ಮಾಡಿದ್ದೀಯಾ ಅಂತ ಕೇಳುವ ಮೂಲಕ ಆಕೆ ಮತ್ತು ಮಹಿಳಾ ಸಮುದಾಯಕ್ಕೆ ಅವಮಾನವಾಗುವ ಹಾಗೆ ಮಾತಾಡುತ್ತಾರೆ.

ಯುವತಿ ಹೇಳೋದನ್ನು ಕೇಳಿಸಿಕೊಳ್ಳೋ ವ್ಯವಧಾನ ಅವರು ತೋರುವುದಿಲ್ಲ. ಅದೂ ಅಲ್ಲದೆ, ಅವರ ಧ್ವನಿ ಸ್ಪಷ್ಟವಾಗಿ ಕೇಳಿಸದು, ಯುವತಿ ಸಹಧ್ವನಿ ಬ್ರೇಕ್ ಆಗ್ತಿದೆ ಅಂತ 2-3 ಸಲ ಹೇಳುತ್ತಾಳೆ. ನಿಮ್ಮ ಮಗನ ವಿರುದ್ಧ ಪೊಲೀಸ್ ಕಂಪ್ಲೇಂಟ್ ನೀಡಿದ್ದು ಎಫ್ ಐ ಆರ್ ಕೂಡ ಆಗಿದೆ ಅಂತ ಸಂತ್ರಸ್ತೆ ಹೇಳಿದರೂ, ದೇವೇಂದ್ರಪ್ಪ ಅದಕ್ಕೆ ಕ್ಯಾರೆ ಅನ್ನಲ್ಲ. ಅವರ ಧೋರಣೆ ಅರ್ಥಮಾಡಿಕೊಳ್ಳೋದು ಯುವತಿಗೆ ಕಷ್ಟವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 17, 2023 02:02 PM