ಮದುವೆಯಾಗೋ ಭರವಸೆ ನೀಡಿ ಯುವತಿಯನ್ನು ವಂಚಿಸಿದನೇ ಬಿಜೆಪಿ ಸಂಸದ ದೇವೇಂದ್ರಪ್ಪರ ವಿವಾಹಿತ ಮಗ ರಂಗನಾಥ್?

ಮದುವೆಯಾಗೋ ಭರವಸೆ ನೀಡಿ ಯುವತಿಯನ್ನು ವಂಚಿಸಿದನೇ ಬಿಜೆಪಿ ಸಂಸದ ದೇವೇಂದ್ರಪ್ಪರ ವಿವಾಹಿತ ಮಗ ರಂಗನಾಥ್?

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 17, 2023 | 12:59 PM

ಪ್ರಾಯಶಃ ತನ್ನ ಹೆಂಡತಿಗೆ ಡಿವೋರ್ಸ್ ನೀಡಿ ಮದುವೆಯಾಗೋದಾಗಿ ರಂಗನಾಥ್ ಹೇಳಿರಬೇಕು. ಮದುವೆ ಅಂತ ಯುವತಿ ಕೇಳಿದಾಗ ಸಬೂಬುಗಳನ್ನು ಹೇಳಿರುತ್ತಾನೆ ಇಲ್ಲವೇ ಸ್ಪಷ್ಟವಾಗಿ ನಿರಾಕರಿಸಿರುತ್ತಾನೆ. ಹಾಗಾಗೇ, ಯುವತಿ ರಂಗನಾಥ್ ನ ನೀಯತ್ತನ್ನು ಅಕ್ರೋಶ ಮತ್ತು ಹತಾಶೆಯಿಂದ ಪ್ರಶ್ನಿಸುತ್ತಿದ್ದಾಳೆ.

ಬೆಂಗಳೂರು: ಬಳ್ಳಾರಿಯ ಬಿಜೆಪಿ ಸಂಸದ ವೈ ದೇವೇಂದ್ರಪ್ಪ (Y Devendrappa) ಮುಖಕ್ಕೆ ಅವರ ಮಗ ಮಸಿ ಬಳಿಯುವ ಕೆಲಸ ಮಾಡಿದಂತಿದೆ ಮಾರಾಯ್ರೇ. ಅಪ್ಪನ ಹೆಸರು, ಅಧಿಕಾರ, ವರ್ಚಸ್ಸುಗಳನ್ನು ದುರುಪಯೋಗ ಮಾಡಿಕೊಂಡು ಅವರ ಮಕ್ಕಳು ಪುಂಡಾಟಿಕೆ, ಸ್ವಚ್ಛಂದ ಬದುಕು ನಡೆಸುವ ಪ್ರಕರಣಗಳು ಒಂದೆರಡಲ್ಲ ಮತ್ತು ದೇವೇಂದ್ರಪ್ಪ ಪುತ್ರ ರಂಗನಾಥ್ ನ (Ranganath) ಪ್ರಕರಣ ಕೊನೆಯದೂ ಅಲ್ಲ. ಈ ಆಡಿಯೋ ಕ್ಲಿಪ್ ನಲ್ಲಿರುವ ಸಂಭಾಷಣೆ ಕೇಳಿದರೆ ವಿಷಯ ಸ್ಪಷ್ಟವಾಗುತ್ತದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ (Maharaja College, Mysuru) ಉಪನ್ಯಾಸಕನಾಗಿ ಕೆಲಸ ಮಾಡುವ ರಂಗನಾಥ್ ವಿವಾಹಿತನಾಗಿದ್ದಾಗ್ಯೂ ಬೇರೊಬ್ಬ ಯುವತಿ ಜೊತೆ ಪ್ರೀತಿ ಪ್ರೇಮದ ನಾಟಕವಾಡಿ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪ್ರಾಯಶಃ ತನ್ನ ಹೆಂಡತಿಗೆ ಡಿವೋರ್ಸ್ ನೀಡಿ ಮದುವೆಯಾಗೋದಾಗಿ ರಂಗನಾಥ್ ಹೇಳಿರಬೇಕು. ಮದುವೆ ಅಂತ ಯುವತಿ ಕೇಳಿದಾಗ ಸಬೂಬುಗಳನ್ನು ಹೇಳಿರುತ್ತಾನೆ ಇಲ್ಲವೇ ಸ್ಪಷ್ಟವಾಗಿ ನಿರಾಕರಿಸಿರುತ್ತಾನೆ. ಹಾಗಾಗೇ, ಯುವತಿ ರಂಗನಾಥ್ ನ ನೀಯತ್ತನ್ನು ಅಕ್ರೋಶ ಮತ್ತು ಹತಾಶೆಯಿಂದ ಪ್ರಶ್ನಿಸುತ್ತಿದ್ದಾಳೆ. ಅವನಿಂದ ಮೋಸ ಹೋಗಿರುವುದು ಖಾತ್ರಿಯಾದ ಬಳಿಕ ಸಂತ್ರಸ್ತೆ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ನ್ಯಾಯ ಕೇಳಿದ್ದಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 17, 2023 12:58 PM