ತಮಿಳುನಾಡಿನಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ, ಇಲ್ಲಿದೆ ವಿಡಿಯೋ
ತಮಿಳುನಾಡಿನ ತೆಂಕಶಿ ಜಿಲ್ಲೆಯ ಖಾಸಗಿ ಕಾರ್ಖಾನೆಯಲ್ಲಿ 15 ಅಡಿ ಉದ್ದ ಗಂಡು ಕಾಳಿಂಗ ಸರ್ಪ ಪತ್ತೆಯಾಗಿದೆ. ಈ ಕಾಳಿಂಗ ಸರ್ಪವನ್ನು ತಮಿಳುನಾಡು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಕಾಳಿಂಗ ಸರ್ಪವು ಕಡಯಂ ಪುರಸಭೆ ವ್ಯಾಪ್ತಿಯ ಗೋವಿಂದಪುರಿಯಲ್ಲಿ ಪತ್ತೆಯಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡಿನ ತೆಂಕಶಿ ಜಿಲ್ಲೆಯ ಖಾಸಗಿ ಕಾರ್ಖಾನೆಯಲ್ಲಿ 15 ಅಡಿ ಉದ್ದದ ಗಂಡು ಕಾಳಿಂಗ ಸರ್ಪ ಪತ್ತೆಯಾಗಿದೆ. ಇದೀಗ ಈ ಕಾಳಿಂಗ ಸರ್ಪವನ್ನು ತಮಿಳುನಾಡು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಇದರ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಕಾಳಿಂಗ ಸರ್ಪವು ಕಡಯಂ ಪುರಸಭೆ ವ್ಯಾಪ್ತಿಯ ಗೋವಿಂದಪುರಿಯಲ್ಲಿ ಪತ್ತೆಯಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಈ ಹಾವನ್ನು ಕಂಡು ಅಲ್ಲಿನ ಜನ ಭಯಗೊಂಡು ತಕ್ಷಣ ನಮ್ಮ ಇಲಾಖೆಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಸರ್ಪವನ್ನು ಒಂದು ಗೋಣಿ ಚಿಲದಲ್ಲಿ ಹಾಕಿ ಕಾಡಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಕೂಡ ತಮಿಳುನಾಡಿನ ಕನ್ನಿಯಾಕುಮಾರಿ ಜಿಲ್ಲೆಯಲ್ಲೂ ಇಂತಹದೇ ಒಂದು ಕಾಳಿಂಗ ಸರ್ಪ ಪತ್ತೆಯಾಗಿತ್ತು ಎಂದು ಹೇಳಲಾಗಿದೆ.
Published On - 11:43 am, Fri, 17 November 23
Latest Videos