AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದರಿಂದ ಏನೂ ಆಗಲ್ಲ: ಜನಾರ್ದನ ರೆಡ್ಡಿಗೆ ಟಾಂಗ್​ ನೀಡಿದ ಸಂಸದ ದೇವೇಂದ್ರಪ್ಪ

ನಮ್ಮ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದರಿಂದ ಏನೂ ಆಗಲ್ಲ. ಅದು ಅಷ್ಟು ಸುಲಭವಲ್ಲ ಎಂದು ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಬಗ್ಗೆ ಬಳ್ಳಾರಿ ಸಂಸದ ದೇವೇಂದ್ರಪ್ಪ ಕಿಡಿಕಾರಿದ್ದಾರೆ.

ನಮ್ಮ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದರಿಂದ ಏನೂ ಆಗಲ್ಲ: ಜನಾರ್ದನ ರೆಡ್ಡಿಗೆ ಟಾಂಗ್​ ನೀಡಿದ ಸಂಸದ ದೇವೇಂದ್ರಪ್ಪ
ಜನಾರ್ದನ ರೆಡ್ಡಿ, ಸಂಸದ ದೇವೇಂದ್ರಪ್ಪ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Feb 08, 2023 | 6:00 PM

Share

ದಾವಣಗೆರೆ: ಮಹಾನ್ ನಾಯಕರೇ ಹೊಸ ಪಕ್ಷ ಕಟ್ಟಿ ವಾಪಸ್ ಬಂದಿದ್ದಾರೆ. ನಮ್ಮ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದರಿಂದ ಏನೂ ಆಗಲ್ಲ. ಅದು ಅಷ್ಟು ಸುಲಭವಲ್ಲ ಎಂದು ಜನಾರ್ದನ ರೆಡ್ಡಿ  (Janardhana Reddy) ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಬಗ್ಗೆ ಬಳ್ಳಾರಿ ಸಂಸದ ದೇವೇಂದ್ರಪ್ಪ ಕಿಡಿಕಾರಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೆಆರ್​ಪಿಪಿ ಎಷ್ಟು ಸೀಟು ಗೆಲ್ಲುತ್ತೆ ಅಂತಾ ಕಾದು ನೋಡೋಣ. ಸರ್ಕಾರದ ಯೋಜನೆ ಹೇಳಿದ್ರೂ ಮತ ಹಾಕೋಕೆ ಯೋಚಿಸ್ತಾರೆ. ಏಕಾಏಕಿ ಪಕ್ಷ ಕಟ್ಟಿದ್ರೆ ಯಾರು ಕೇಳ್ತಾರೆ.  ರೆಡ್ಡಿ ವಾಪಸ್ ಕರೆ ತರುವು ವಿಚಾರ ಕೇಂದ್ರ ನಾಯಕರಿಗೆ ಬಿಟ್ಟಿದ್ದು. ಈ ಬಗ್ಗೆ ಚರ್ಚಿಸಿದ್ದೇವೆ, ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ ಎಂದು ಹೇಳಿದರು.

ಜೋಶಿ ಸಿಎಂ ಮಾಡಲು RSS​​​ ಹುನ್ನಾರ ಎಂಬ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೆ. ಬ್ರಾಹ್ಮಣ, ಒಕ್ಕಲಿಗ, ದಲಿತ, ಲಿಂಗಾಯತ ಯಾರೇ ಆಗಬಹುದು. ಹೆಚ್.ಡಿ.ಕುಮಾರಸ್ವಾಮಿ ವಿಷಯಗಳನ್ನು ಕೂಡಿ ಇಟ್ಟಿರುತ್ತಾರೆ. ಇಂತಹ ಸಂದರ್ಭದಲ್ಲಿ ಪಟಾಕಿ ಹಾರಿಸಿಬಿಡ್ತಾರೆ ಎಂದರು.

ಇದನ್ನೂ ಓದಿ: ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಸಜ್ಜಾದ ಜನಾರ್ದನ ರೆಡ್ಡಿ: ಪತಿಗೆ ಸಾಥ್​ ನೀಡಿದ ಪತ್ನಿ, ಪ್ರಚಾರಕ್ಕಿಳಿದ ಪುತ್ರಿ

ಕಲ್ಯಾಣ ಪ್ರಗತಿ ಪಕ್ಷದಿಂದ ಜನಾರ್ದನ ರೆಡ್ಡಿ ಅಖಾಡಕ್ಕೆ 

ಸುಮಾರು ದಿನಗಳ ಕಾಲ ರಾಜಕೀಯದಿಂದ ದೂರ ಉಳಿದ್ದಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಆ ಮೂಲಕ ಅವರು ತಮ್ಮದೆ ಆದ ಕಲ್ಯಾಣ ಪ್ರಗತಿ ಎಂಬ ಪಕ್ಷವನ್ನು ಸ್ಥಾಪಿಸುವುದರೊಂದಿಗೆ ರಾಜಕಾರಣದಲ್ಲಿ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಕೊಪ್ಪಳದಿಂದ ಜನಾರ್ದನ ರೆಡ್ಡಿ ಸ್ಪರ್ಧಿಸಲಿದ್ದು, ಈಗಾಗಲೇ ಚುನಾವಣಾ ಕಾರ್ಯಗಳನ್ನು ಆರಂಭಿಸಿದ್ದಾರೆ. ಇನ್ನು ಇತ್ತ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ತಮ್ಮ ಪತಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಇದನ್ನೂ ಓದಿ: Bellary Politics: ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಜನಾರ್ದನ ರೆಡ್ಡಿ ಪತ್ನಿ ಸಭೆ: ಕೈ-ಕಮಲದಲ್ಲಿ ಆತಂಕ ಶುರು

ಮುಸ್ಲಿಂ ಮತಗಳನ್ನ ಸೆಳೆಯಲು ರೆಡ್ಡಿ ಮಾಸ್ಟರ್ ಪ್ಲ್ಯಾನ್

ಜನಾರ್ದನ ರೆಡ್ಡಿ ಮುಸ್ಲಿಂ ಮತಗಳನ್ನ ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಕಾಂಗ್ರೆಸ್ ವೋಟ್ ಬ್ಯಾಂಕ್ ಮೇಲೆ ಕೆಆರ್​ಪಿಪಿ ಕಣ್ಣು ಇಟ್ಟಿದೆ. ಈ ಹಿಂದೆ ರೆಡ್ಡಿ ಅಮೀರ್ ದರ್ಗಾಕ್ಕೆ ಭೇಟಿ ನೀಡಿ ಚಾದರ್ ಸಲ್ಲಿಕೆ ಮಾಡಿದ್ದರು. ಗಂಗಾವತಿ ಕ್ಷೇತ್ರದ ಖಾಲಿದ್ ಅಲಿ ಬಾಬಾ ದರ್ಗಾಗೂ ಸಹಾಯ ಮಾಡಿದ್ದರು. ಈ ಮೂಲಕ ಮುಸ್ಲಿಂ ಸಮುದಾಯದ ಮನವೊಲಿಕೆಗೆ ರೆಡ್ಡಿ ರಣತಂತ್ರ ರೂಪಿಸಿದ್ದು, ಕಾಂಗ್ರೇಸ ಪಕ್ಷದ ವೋಟ್ ಬ್ಯಾಂಕ್ ಕಬಳಿಸಲು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಹೌದು ಬಳ್ಳಾರಿ ನಗರದ 40ಕ್ಕೂ ಹೆಚ್ಚು ಮಸೀದಿಗಳ ಮೌಲ್ವಿಗಳ ಜೊತೆ ಲಕ್ಷ್ಮೀ ಅರುಣಾ ಸಭೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:00 pm, Wed, 8 February 23

ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ