ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಸಜ್ಜಾದ ಜನಾರ್ದನ ರೆಡ್ಡಿ: ಪತಿಗೆ ಸಾಥ್ ನೀಡಿದ ಪತ್ನಿ, ಪ್ರಚಾರಕ್ಕಿಳಿದ ಪುತ್ರಿ
ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಜನಾರ್ದನ ರೆಡ್ಡಿ ನಿಂತಿದ್ದಾರೆ. ಜನರ ಅಭಿವೃದ್ಧಿಗಾಗಿ ಮತ್ತೊಮ್ಮೆ ರಾಜಕೀಯ ಪಕ್ಷ ಕಟ್ಟಿದ್ದಾರೆ ಎಂದು ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ಹೇಳಿದರು.
ಬಳ್ಳಾರಿ: ಸುಮಾರು ದಿನಗಳ ಕಾಲ ರಾಜಕೀಯದಿಂದ ದೂರ ಉಳಿದ್ದಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಆ ಮೂಲಕ ಅವರು ತಮ್ಮದೆ ಆದ ಕಲ್ಯಾಣ ಪ್ರಗತಿ ಎಂಬ ಪಕ್ಷವನ್ನು ಸ್ಥಾಪಿಸುವುದರೊಂದಿಗೆ ರಾಜಕಾರಣದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕೊಪ್ಪಳದಿಂದ ಜನಾರ್ದನ ರೆಡ್ಡಿ ಸ್ಪರ್ಧಿಸಲಿದ್ದು, ಈಗಾಗಲೇ ಚುನಾವಣಾ ಕಾರ್ಯಗಳನ್ನು ಆರಂಭಿಸಿದ್ದಾರೆ. ಇನ್ನು ಇತ್ತ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ತಮ್ಮ ಪತಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇನ್ನು ನನ್ನ ಮಗಳು ಬ್ರಹ್ಮಣಿ ಕೂಡ ರಾಜಕೀಯಕ್ಕೆ ಬರುತ್ತಿದ್ದಾಳೆ ಎಂದು ಪರೋಕ್ಷವಾಗಿ ಹೇಳಿದ್ದರು. ಆ ಮೂಲಕ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ತಮ್ಮ ತಂದೆಯ ಪರವಾಗಿ ಬಳ್ಳಾರಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಜನಾರ್ದನ ರೆಡ್ಡಿ: ಬ್ರಹ್ಮಣಿ
ಜಿಲ್ಲೆಯಲ್ಲಿ ಬ್ರಹ್ಮಣಿ ಮಾತನಾಡಿ, ಒಂದು ಕಡೆ ಸಂತೋಷ, ಇನ್ನೊಂದು ಕಡೆ ದುಃಖ. ಮಹತ್ವದ ಜವಾಬ್ದಾರಿ ಹೊತ್ತು ನಿಮ್ಮ ಮುಂದೆ ಬಂದಿದ್ದೇನೆ. ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಜನಾರ್ದನ ರೆಡ್ಡಿ ನಿಂತಿದ್ದಾರೆ. ಜನರ ಅಭಿವೃದ್ಧಿಗಾಗಿ ಮತ್ತೊಮ್ಮೆ ರಾಜಕೀಯ ಪಕ್ಷ ಕಟ್ಟಿದ್ದಾರೆ. ಅವರ ಕಟ್ಟಿದ ಸಾಮ್ರಾಜ್ಯದಿಂದ ಅವರೇ ದೂರವಾಗೋ ಸ್ಥಿತಿ ಬಂದಿದೆ. ನಿಸ್ವಾರ್ಥ ಕರ್ಮ ಮಾಡಿ ಫಲ ಭಗವಂತನಿಗೆ ಬಿಟ್ಟದ್ದು ಎನ್ನುತ್ತಾರೆ ಜನಾರ್ದನ ರೆಡ್ಡಿ. ಬಳ್ಳಾರಿ ಮಣ್ಣಿನ ಶಕ್ತಿಯೇ ಬೇರೆ, ಇದು ಭಗವಂತನ ಸೃಷ್ಟಿ ಎನ್ನುತ್ತಿದ್ದರು. ಯಾವ ಊರಿಗೆ ಹೋದ್ರು ಬಳ್ಳಾರಿ ಪ್ರೀತಿಸುತ್ತಿದ್ರು ಇಲ್ಲಿಗೆ ಬರಬೇಕು ಎನ್ನುತ್ತಿದ್ದರು.
ಬಳ್ಳಾರಿಯಿಂದ ದೂರವಾಗಿದ್ದು, ವಿಧಿಯಾಟ
ವಿಧಿಯಾಟವೇನೆಂದರೆ ಅವರ ಪ್ರೀತಿಸೋ ಬಳ್ಳಾರಿಯಿಂದಲೇ ಅವರು ದೂರವಾಗುತ್ತಾರೆ ಎಂದು ಕೊಂಡಿರಲಿಲ್ಲ. ಸಮಯ ಕಡಿಮೆ ಇದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಬರಬಹುದು. ಎಲ್ಲಾ ಪಕ್ಷ ಕಟ್ಟೋಣ. ಇದ್ದದ್ದು ಇದ್ದಂಗೆ ಜನರ ಮುಂದೆ ಹೋಗಿ ಹೇಳೋಣ. ಜನಾರ್ದನ ರೆಡ್ಡಿ ಒಬ್ಬಂಟಿಯಲ್ಲ ನಿಮ್ಮಲ್ಲರ ಆಶೀರ್ವಾದ ನಮ್ಮ ಮೇಲಿದೆ. ಮನೆ ಮನೆಗೂ ಬಂದು ಪಕ್ಷದ ಬಗ್ಗೆ ಹೇಳ್ತೇನೆ. ಶೀಘ್ರದಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡ್ತೇವೆ. ಜನರಿಂದ ಬಳ್ಳಾರಿಗೆ ಮತ್ತೊಮ್ಮೆ ಜನಾರ್ದನ ರೆಡ್ಡಿ ಬರಬೇಕೆಂದು ಜನರಿಂದ ಬ್ರಹ್ಮಣಿ ಹೇಳಿಸಿದರು.
ಇದು ನನ್ನ ಉಸಿರು ನಿಲ್ಲುವಂತೆ ಮಾಡಿತ್ತು: ಪತ್ನಿ ಲಕ್ಷ್ಮೀ ಅರುಣಾ
ಇನ್ನು ಜನಾರ್ದನ ರೆಡ್ಡಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪತ್ನಿ ಲಕ್ಷ್ಮೀ ಅರುಣಾ ಮಾತನಾಡಿ, ಜನಾರ್ದನ ರೆಡ್ಡಿ ಇಲ್ಲದೇ ವೇದಿಕೆಯಲ್ಲಿ ಮಾತನಾಡ್ತೇನೆ ಎಂದು ಕನಸಿನಲ್ಲಿ ಊಹಿಸಿರಕಿಲ್ಲ. ಜನಾರ್ದನ ರೆಡ್ಡಿ ಪ್ರೀತಿ ಮಾಡೋ ಜನರ ಮಧ್ಯೆ ಇದೀಗ ಮಾತನಾಡ್ತಿದ್ದೇನೆ. ಕಷ್ಟ ನಷ್ಟು ನೋವು ನಲಿವು ಹಂಚಿಕೊಳ್ಳಲು ನಿಮ್ಮ ಮುಂದೆ ಬಂದಿದ್ದೇನೆ. ಎಲ್ಲರನ್ನೂ ಬೆಳೆದ್ದ ಜನಾರ್ದನ ರೆಡ್ಡಿ ಸಿಂಧನೂರಿನಲ್ಲಿ ರೆಡ್ಡಿ ಒಬ್ಬಂಟಿ ಎಂದು ಮಾತನಾಡಿದ್ರು. ಇದು ನನ್ನ ಉಸಿರು ನಿಲ್ಲುವಂತೆ ಮಾಡಿತ್ತು. ಆದರೆ ಅವರ ಪಕ್ಷ ಇದೀಗ ಅವರ ಬೆಂಬಲಕ್ಕೆ ನಿಂತಿದೆ. ಬಳ್ಳಾರಿ ಜನರು ನಮ್ಮ ಕೈಬಿಡೋದಿಲ್ಲ ಎನ್ನುವದು ಈ ವೇದಿಕೆ ನೋಡಿದ್ರೇ ಗೊತ್ತಾಗ್ತದೆ ಎಂದರು.
ಬಳ್ಳಾರಿ ಜನರಿಂದ ದೂರ ಮಾಡಲು ಆಗಲ್ಲ
2008ರಲ್ಲಿ ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದಾಗ ಬಳ್ಳಾರಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಹುಟ್ಟುವ ಸೂರ್ಯನನ್ನು ನಿಲ್ಲಿಸೋಕೆ ಆಗಲ್ಲ. ಹಾಗೇ ಜನರಿಂದ ಜನಾರ್ದನನನ್ನು ದೂರ ಮಾಡಲಾಗೋದಿಲ್ಲ. ಬಳ್ಳಾರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪೂರ್ಣವಾಗಬೇಕಾದ್ರೇ ಮತ್ತೊಮ್ಮೆ ರೆಡ್ಡಿ ಬಳ್ಳಾರಿಗೆ ಬರಬೇಕು. ಜನಾರ್ದನ ರೆಡ್ಡಿ ಅಭಿವೃದ್ಧಿ ಸಹಿಸದೇ ಅವರನ್ನು ಜೈಲಿಗೆ ಕಳುಹಿಸಲಾಯಿತು ಬಳ್ಳಾರಿಗೆ ಬರದಂತೆ ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿದೈರ್ಯ, ಬುದ್ಧಿವಂತಿಕೆಯ ನನ್ನ ಗಂಡನಿಗೆ ಬಿಟ್ರೇ ಬೇರೆ ಯಾರಿಗೂ ಇಲ್ಲ ಎಂದು ಲಕ್ಷ್ಮೀ ಅರುಣಾ ಗುಡುಗಿದರು.
ರಾಜ್ಯದ ಮತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.