ಮಂಜು ಅವರ ವ್ಯಕ್ತಿತ್ವ ಎಂಥದ್ದು ಎನ್ನುವುದನ್ನು ವಿವರಿಸಿದ್ದಾರೆ ದಿವ್ಯಾ ಸುರೇಶ್; ವಿಡಿಯೊ ನೋಡಿ
ಬಿಗ್ಬಾಸ್ 8ರ ಸ್ಪರ್ಧಿ, ಎಲ್ಲರ ಮನೆ ಮಾತಾಗಿರುವ ದಿವ್ಯಾ ಸುರೇಶ್ ಟಿವಿ 9ನೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಸಿಕ್ಕ ಮಂಜು ಪಾವಗಡ ಅವರ ವ್ಯಕ್ತಿತ್ವ ಎಂಥದ್ದು ಎನ್ನುವುದನ್ನು ಅವರು ಹೇಳಿದ್ದಾರೆ.
ಬಿಗ್ಬಾಸ್ 8ರ ವಿಜೇತ ಮಂಜು ಪಾವಗಡ ಕುರಿತು ದಿವ್ಯಾ ಸುರೇಶ್ ಮಾತನಾಡಿದ್ದಾರೆ. ಮಂಜು ಅವರ ವ್ಯಕ್ತಿತ್ವ ಎಂಥದ್ದು, ಅವರೊಂದಿಗೆ ಆತ್ಮೀಯತೆ ಏಕೆ ಬೆಳೆಯಿತು ಮೊದಲಾದ ವಿಷಯಗಳನ್ನು ಅವರು ಟಿವಿ9ನೊಂದಿಗೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ನಡುವೆ ಒಂದು ರೀತಿಯ ಆತ್ಮೀಯತೆ ಇತ್ತು. ಮೊದಲ ಇನ್ನಿಂಗ್ಸ್ನಲ್ಲಿ ಇಬ್ಬರೂ ತುಂಬಾ ಆಪ್ತವಾಗಿ ನಡೆದುಕೊಳ್ಳುತ್ತಿದ್ದರು. ಪರಸ್ಪರ ಹೆಚ್ಚು ಸಮಯ ಜೊತೆಯಾಗಿ ಕಳೆಯುತ್ತಿದ್ದರು. ಅದು ಕೆಲವರಿಂದ ಟೀಕೆಗೂ ಒಳಗಾಯಿತು. ಸೆಕೆಂಡ್ ಇನ್ನಿಂಗ್ಸ್ ಮುಗಿಯುವಾಗ ದಿವ್ಯಾ ಅವರು ‘ಮಂಜು ನನ್ನ ಬೆಸ್ಟ್ ಫ್ರೆಂಡ್’ ಎಂದು ಹೇಳಿದ್ದು ಮಾತ್ರವಲ್ಲದೇ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡು ವಿಶೇಷ ಕೇಕ್ ತರಿಸಿ ಫ್ರೆಂಡ್ಶಿಪ್ ಡೇ ಆಚರಿಸಿದ್ದರು.
ಇದನ್ನೂ ನೋಡಿ:
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್
ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ದಿವ್ಯಾ ಸುರೇಶ್ ಆಸೆ ಈಡೇರಿಸಿದ ಬಿಗ್ ಬಾಸ್
(Divya Suresh Opens up about her friendship between Manju Pavagada)