ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡ್ರು! ಆರೋಪಿಗಳೇ ಚಿತ್ರೀಕರಿಸಿದ ವಿಡಿಯೋದಿಂದ ಒಬ್ಬೊಬ್ಬರಾಗಿ ಸಿಕ್ಕಿಬಿದ್ರು!

| Updated By: ಸಾಧು ಶ್ರೀನಾಥ್​

Updated on: Aug 19, 2020 | 1:59 PM

[lazy-load-videos-and-sticky-control id=”imPjYamJ9fE”] ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿದ್ದೆ ಬಲು ರೋಚಕ. ಆರೋಪಿಗಳನ್ನ ಬಂಧಿಸಿದ ತಕ್ಷಣವೇ ಅವರ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಅದರ ಮೂಲಕವೇ ಇನ್ನಿತರ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳ ಚಿತ್ರೀಕರಿಸಿದ ವಿಡಿಯೋದಿಂದಲೇ ಮತ್ತಷ್ಟು ಆರೋಪಿಗಳನ್ನ ಖಾಕಿ ಪಡೆ ಪತ್ತೆ ಹಚ್ಚಿದೆ. ಹಾಗಾಗಿ, ಗಲಭೆಕೋರರಿಗೆ ಮುಳುವಾಗಿದ್ದೇ  ಅವರು ರೆಕಾರ್ಡ್ ಮಾಡಿದ ವಿಡಿಯೋಗಳು. ರಾತ್ರಿಗತ್ತಲು ಇದ್ದರೂ  ಮೊಬೈಲ್ ಲೈಟ್ ಆನ್ ಮಾಡಿ ವಿಡಿಯೋ ಮಾಡಿದ್ದರು! ಗಲಾಟೆಗೆ ಬಂದ ಸಾಕಷ್ಟು […]

ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡ್ರು! ಆರೋಪಿಗಳೇ ಚಿತ್ರೀಕರಿಸಿದ ವಿಡಿಯೋದಿಂದ ಒಬ್ಬೊಬ್ಬರಾಗಿ ಸಿಕ್ಕಿಬಿದ್ರು!
Follow us on

[lazy-load-videos-and-sticky-control id=”imPjYamJ9fE”]

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿದ್ದೆ ಬಲು ರೋಚಕ.

ಆರೋಪಿಗಳನ್ನ ಬಂಧಿಸಿದ ತಕ್ಷಣವೇ ಅವರ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಅದರ ಮೂಲಕವೇ ಇನ್ನಿತರ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳ ಚಿತ್ರೀಕರಿಸಿದ ವಿಡಿಯೋದಿಂದಲೇ ಮತ್ತಷ್ಟು ಆರೋಪಿಗಳನ್ನ ಖಾಕಿ ಪಡೆ ಪತ್ತೆ ಹಚ್ಚಿದೆ. ಹಾಗಾಗಿ, ಗಲಭೆಕೋರರಿಗೆ ಮುಳುವಾಗಿದ್ದೇ  ಅವರು ರೆಕಾರ್ಡ್ ಮಾಡಿದ ವಿಡಿಯೋಗಳು.

ರಾತ್ರಿಗತ್ತಲು ಇದ್ದರೂ  ಮೊಬೈಲ್ ಲೈಟ್ ಆನ್ ಮಾಡಿ ವಿಡಿಯೋ ಮಾಡಿದ್ದರು!
ಗಲಾಟೆಗೆ ಬಂದ ಸಾಕಷ್ಟು ಜನರು ಗಲಭೆಯನ್ನ ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದರು. ಗಲಾಟೆ ವೇಳೆ ರಾತ್ರಿಗತ್ತಲು ಇದ್ದರೂ  ಮೊಬೈಲ್ ಲೈಟ್ ಆನ್ ಮಾಡಿ ವಿಡಿಯೋ ಮಾಡಿದ್ದರು. ವಿಡಿಯೋ ಡಿಲೀಟ್‌ ಮಾಡದೇ ತಮ್ಮ ಮೊಬೈಲ್‌ಗಳಲ್ಲಿ ಹಾಗೆ ಉಳಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಕಾರು ಹೊಡೆಯುವದನ್ನ, ಪೊಲೀಸ್‌ ಠಾಣೆಗೆ ಕಲ್ಲು ತೂರುವ ದೃಶ್ಯಗಳನ್ನ ಚಿತ್ರೀಕರಿಸಿದ್ದರು. ಈ ಮೊಬೈಲ್ ವಿಡಿಯೋಗಳನ್ನೇ ಆಧರಿಸಿ ಪೊಲೀಸರು ಆರೋಪಿಗಳನ್ನ ಒಬ್ಬೊಬ್ಬರನ್ನಾಗಿ ಬಂಧಿಸ್ತಿದ್ದಾರೆ. ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳೋದು ಅಂದ್ರೆ ಇದೇ ಅಲ್ವಾ!?

Published On - 11:17 am, Wed, 19 August 20