Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ಆಧಾರಸಹಿತವಾಗಿ ಬದಲು ‘ಆಧಾರರಹಿತವಾಗಿ’ ಆರೋಪ ಮಾಡುತ್ತಿದ್ದೇನೆ ಎಂದ ಡಿಕೆ ಶಿವಕುಮಾರ್!

Karnataka Assembly Polls: ಆಧಾರಸಹಿತವಾಗಿ ಬದಲು ‘ಆಧಾರರಹಿತವಾಗಿ’ ಆರೋಪ ಮಾಡುತ್ತಿದ್ದೇನೆ ಎಂದ ಡಿಕೆ ಶಿವಕುಮಾರ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 22, 2023 | 11:30 AM

ಎಲ್ಲ ಆರೋಪಗಳನ್ನು ‘ಆಧಾರರಹಿತವಾಗಿ’ ಮಾಡುತ್ತಿದ್ದೇನೆ ಎಂದು ಶಿವಕುಮಾರ್ ಹೇಳುತ್ತಾರೆ. ನೆರೆದಿದ್ದ ಪತ್ರಕರ್ತರು ಅವರ ತಪ್ಪು ತಿದ್ದುತ್ತಾರೆ.

ಬೆಂಗಳೂರು: ಸದನದಲ್ಲಿ ಆಡಳಿತ ಪಕ್ಷದ ನಾಯಕರಿಗೆ ಕನ್ನಡ ಪಾಠ ಮಾಡುವ ಸಿದ್ದರಾಮಯ್ಯ (Siddaramaiah) ಮೇಷ್ಟ್ರು ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೂ ಆಗಾಗ ಕನ್ನಡ ಹೇಳಿಕೊಡುವುದು ಒಳಿತು ಮಾರಾಯ್ರೇ. ಯಾಕೆ ಇದನ್ನು ನಾವು ಹೇಳ್ತಾ ಇದ್ದೀವಿ ಅನ್ನೋದು ವಿಡಿಯೋದಲ್ಲಿ ನಿಮಗೆ ಗೊತ್ತಾಗುತ್ತದೆ. ಬಿಜೆಪಿ ಸರ್ಕಾರ ಹೇಗೆ ತನ್ನ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಅಂತ ಅವರು ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ನಡೆಸಿದ ತುರ್ತು ಸುದ್ದಿಗೋಷ್ಟಿ (emergency presser) ಕರೆದು ವಿವರಿಸುವಾಗ, ಎಲ್ಲ ಆರೋಪಗಳನ್ನು ‘ಆಧಾರರಹಿತವಾಗಿ’ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ನೆರೆದಿದ್ದ ಪತ್ರಕರ್ತರು ಅವರ ತಪ್ಪು ತಿದ್ದುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ