ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಡಿಸಿಎಂ ಆಸ್ಪತ್ರೆಗೆ ದೌಡು

Updated on: May 01, 2026 | 7:16 PM

ಖಾಸಗಿ ಜೀವನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ (D.K.Shivakumar) ತಾತನ ಪ್ರಮೋಷನ್ ಸಿಕ್ಕಿದೆ. ಹೌದು...ಡಿಸಿಎಂ ಡಿ.ಕೆ.ಶಿವಕುಮಾರ್‌ಅವರ ಪುತ್ರಿ ಐಶ್ವರ್ಯ ಹೆಗ್ಡೆ (Aisshwarya Dks Hegde ) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ವಿಷಯ ತಿಳಿಯುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಅವರು ಖುಷಿಯಲ್ಲಿ ಮಗಳು ಹಾಗೂ ಮೊಮ್ಮಳನ್ನ ನೋಡಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಬೆಂಗಳೂರು, (ಮೇ 01): ಖಾಸಗಿ ಜೀವನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ (D.K.Shivakumar) ತಾತನ ಪ್ರಮೋಷನ್ ಸಿಕ್ಕಿದೆ. ಹೌದು…ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯ ಹೆಗ್ಡೆ (Aisshwarya Dks Hegde ) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ವಿಷಯ ತಿಳಿಯುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಅವರು ಖುಷಿಯಲ್ಲಿ ಮಗಳು ಹಾಗೂ ಮೊಮ್ಮಳನ್ನ ನೋಡಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ವಿ.ಜಿ.ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಹೆಗ್ಡೆ 2021ರ ಫೆ.14 ರಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದು, ಇದೀಗ ಐದು ವರ್ಷದ ಬಳಿಕ ದಂಪತಿಗೆ ಮಗುವಾಗಿದೆ.  ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಡಿ.ಕೆ.ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯ ಭಾಗವಹಿಸಿದ್ದು, ಆಗ ಅವರು ಗರ್ಭೀಣಿ ಎನ್ನುವ ವಿಚಾರ ಗೊತ್ತಾಗಿತ್ತು,

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 01, 2026 06:52 PM
Follow Us