DKS in Mandya: ರಮ್ಯಾ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆ ಡಿಕೆ ಶಿವಕುಮಾರ್ಗೆ ಯಾಕೋ ಸರಿಯೆನಿಸಲಿಲ್ಲ!
ಡಿಕೆ ಸುರೇಶ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ನೀಡಿ ರಾಮನಗರದಿಂದ ಸ್ಪರ್ಧಿಸಲಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಶಿವಕುಮಾರ್, ತಾನು ಸಂಸತ್ತಿನಲ್ಲೇ ಆರಾಮಾಗಿದ್ದೇನೆ ಅಂತ ಅವರು ಹೇಳಿದ್ದಾರೆ ಎಂದರು.
ಮಂಡ್ಯ: ಚಿತ್ರ ನಟಿ ಮತ್ತು ಮಾಜಿ ಸಂಸದೆ ರಮ್ಯಾ (Ramya) ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಅಂತ ಮಂಡ್ಯದಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಲ್ಲಿ ಸಿಡಿಮಿಡಿ ಹುಟ್ಟಿಸಿತು. ಅವರನ್ನೇ ಕೇಳಿ ಅಂತ ಚುಟುಕಾಗಿ ಉತ್ತರಿಸಿದರು. ಡಿಕೆ ಸುರೇಶ್ (DK Suresh) ಅವರು ರಾಜ್ಯ ರಾಜಕಾರಣಕ್ಕೆ ಎಂಟ್ರಿ ನೀಡಿ ರಾಮನಗರದಿಂದ ಸ್ಪರ್ಧಿಸಲಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಶಿವಕುಮಾರ್, ತಾನು ಸಂಸತ್ತಿನಲ್ಲೇ ಆರಾಮಾಗಿದ್ದೇನೆ ಅಂತ ಅವರು ಹೇಳಿದ್ದಾರೆ ಆದರೆ ಕ್ಷೇತ್ರದ ಕಾರ್ಯಕರ್ತರು ಅವರೇ ಸ್ಪರ್ಧಿಸಿದರೆ ಚೆನ್ನಾಗಿರುತ್ತದೆ ಅಂತ ಒತ್ತಡ ಹೇರುತ್ತಿದ್ದಾರೆ, ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ