Karnataka Assembly Polls: ರಾಜಕಾರಣಿಗಳಿಗೆ ಸಾವಿನ ಮನೆಯಲ್ಲೂ ರಾಜಕೀಯದ ಮಾತು ಬೇಕೇ?

|

Updated on: Apr 15, 2023 | 12:31 PM

ಸತ್ತವರ ಮನೆಯಲ್ಲಿ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಶೋಕದಲ್ಲಿ ಮುಳುಗಿರುತ್ತಾರೆ. ರಾಜಕಾರಣಿಗಳು ಅಲ್ಲಿ ಸ್ವಲ್ಪ ಸಮಯದವರೆಗೆ ಮೌನವಾಗಿ ಕೂತಿದ್ದರೆ ಅದೇ ಅಗಲಿದ ಆತ್ಮಕ್ಕೆ ಸಲ್ಲಿಸುವ ಗೌರವ.

ದೇವನಹಳ್ಳಿ: ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ವೆಂಕಟಸ್ವಾಮಿ (Venkataswamy) ಪಾರ್ಥೀವ ಶರೀರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಶ್ರದ್ಧಾಂಜಲಿ ಸಲ್ಲಿಸಿದರು. ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಹೆಚ್ ಮುನಿಯಪ್ಪ (KH Muniyappa) ಸಹ ಶಿವಕುಮಾರ್ ಜೊತೆ ತೆರಳಿ ತಮ್ಮ ಅಂತಿಮ ನಮನ ಸಲ್ಲಿಸಿದರು. ಅದೆಲ್ಲ ಸರಿ, ಆದರೆ ಈ ನಾಯಕರು ಸಾವಿನ ಮನೆಯಲ್ಲಿ ಕೂತು ರಾಜಕೀಯದ ವಿಷಯಗಳನ್ನು ಚರ್ಚಿಸುವುದು ಬೇಸರ ಹುಟ್ಟಿಸುತ್ತದೆ. ರಾಜಕೀಯವನ್ನು ಸೂತಕದ ಮನೆ ಬಿಟ್ಟು ಎಲ್ಲಿ ಬೇಕಾದರೂ ಚರ್ಚಿಸಬಹುದು. ಸತ್ತವರ ಮನೆಯಲ್ಲಿ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಶೋಕದಲ್ಲಿ ಮುಳುಗಿರುತ್ತಾರೆ. ರಾಜಕಾರಣಿಗಳು ಅಲ್ಲಿ ಸ್ವಲ್ಪ ಸಮಯದವರೆಗೆ ಮೌನವಾಗಿ ಕೂತಿದ್ದರೆ ಅದೇ ಅಗಲಿದ ಆತ್ಮಕ್ಕೆ ಸಲ್ಲಿಸುವ ಗೌರವ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Sat, 15 April 23

Follow us on