ಎಷ್ಟು ಖರ್ಚಾಗಿದೆ ಎಂದು ಕೆಲವರಿಗೆ ಗಾಬರಿ ಆಗಿರಬಹುದು: ಹೊಸ ಮನೆ ಬಗ್ಗೆ ಸಿಎಂ ಬಿಚ್ಚು ಮಾತು

Edited By:

Updated on: Nov 16, 2026 | 2:19 PM

ಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿಂದು  ಪ್ರತಿಕ್ರಿಯಿಸಿದ್ದು, ಖಾಸಗಿ ಗೃಹ ಬಿಟ್ಟು ಕುಮಾರಕೃಪಾ ಸರ್ಕಾರಿ ನಿವಾಸ ತೆಗೆದುಕೊಂಡಿದ್ದೆ. ಕುಮಾರ ಕೃಪಾ ನಿವಾಸದಲ್ಲಿ ಶೇ.10ರಷ್ಟು ನವೀಕರಣ ಮಾಡಿದ್ದೇನೆ. ಹೆರಿಟೇಜ್ ಹಾಗೆ ಉಳಿಸಿಕೊಂಡಿದ್ದೇವೆ.​ ಎಷ್ಟು ಖರ್ಚಾಗಿರಬಹುದು ಎಂದು ಕೆಲವರಿಗೆ ಗಾಬರಿ ಆಗಿರಬಹುದು. ಸೆಕ್ಯೂರಿಟಿಗಾಗಿ ಸ್ವಲ್ಪ ಖರ್ಚಾಗಿರಬಹುದು. ಮನೆ ನವೀಕರಣಕ್ಕೆ ಎಷ್ಟು ಖರ್ಚಾಗಿದೆ ಎಂದು ನನಗೆ ಗೊತ್ತಿಲ್ಲ. ನಿವಾಸದ ನವೀಕರಣಕ್ಕೆ ಕಡಿಮೆ ವೆಚ್ಚದ ಕಲ್ಲು ಬಳಕೆ ಮಾಡಿದ್ದೇನೆ. ನನ್ನ ಮನೆಯಲ್ಲಿನ ಫರ್ನಿಚರ್ ಬಳಕೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು, (ನವೆಂಬರ್ 16): ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನೂತನ ಅಧಿಕೃತ ನಿವಾಸವಾಗಿ ಸಿದ್ಧಗೊಂಡಿರುವ ಕುಮಾರಕೃಪಾಅತಿಥಿ ಗೃಹಕ್ಕೆ ಗಂಗಾ ಎಂದು ಮರುನಾಮಕರಣ ಮಾಡಲಾಗಿದೆ. ಈಗಾಗಲೇ ನೂತನ ನಾಮಫಲಕವನ್ನು ಅಳವಡಿಸಿ ಇಂದು (ನವೆಂಬರ್ 16) ಮೊದಲ ಕಾರ್ತಿಕ ಸೋಮವಾರದ ಶುಭ ಮುಹೂರ್ತದಲ್ಲಿ ಪೂಜೆ ಪುನಸ್ಕಾರ ನೆರವೇರಿಸಿದ್ದು, ಇನ್ಮುಂದೆ ಕುಟುಂಬ ಸಮೇತರಾಗಿ ಇದೇ ನಿವಾಸಲ್ಲಿ ವಾಸಿಸಲಿದ್ದಾರೆ. ಇನ್ನೊಂದೆಡೆ ಮನೆ ನವೀಕರಣಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಹೀಗಾಗಿ ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿಂದು  ಪ್ರತಿಕ್ರಿಯಿಸಿದ್ದು, ಖಾಸಗಿ ಗೃಹ ಬಿಟ್ಟು ಕುಮಾರಕೃಪಾ ಸರ್ಕಾರಿ ನಿವಾಸ ತೆಗೆದುಕೊಂಡಿದ್ದೆ. ಕುಮಾರ ಕೃಪಾ ನಿವಾಸದಲ್ಲಿ ಶೇ.10ರಷ್ಟು ನವೀಕರಣ ಮಾಡಿದ್ದೇನೆ. ಹೆರಿಟೇಜ್ ಹಾಗೆ ಉಳಿಸಿಕೊಂಡಿದ್ದೇವೆ.​ ಎಷ್ಟು ಖರ್ಚಾಗಿರಬಹುದು ಎಂದು ಕೆಲವರಿಗೆ ಗಾಬರಿ ಆಗಿರಬಹುದು. ಸೆಕ್ಯೂರಿಟಿಗಾಗಿ ಸ್ವಲ್ಪ ಖರ್ಚಾಗಿರಬಹುದು. ಮನೆ ನವೀಕರಣಕ್ಕೆ ಎಷ್ಟು ಖರ್ಚಾಗಿದೆ ಎಂದು ನನಗೆ ಗೊತ್ತಿಲ್ಲ. ನಿವಾಸದ ನವೀಕರಣಕ್ಕೆ ಕಡಿಮೆ ವೆಚ್ಚದ ಕಲ್ಲು ಬಳಕೆ ಮಾಡಿದ್ದೇನೆ. ನನ್ನ ಮನೆಯಲ್ಲಿನ ಫರ್ನಿಚರ್ ಬಳಕೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಗುರುವಾರ 224 ಶಾಸಕರು, ಸಚಿವರು, ಸಂಸದರನ್ನು ಆಹ್ವಾನಿಸಿದ್ದೇನೆ ಗುರುವಾರದಿಂದ ಇಲ್ಲಿಯೇ (ಗಂಗಾ ನಿವಾಸ) ಭೇಟಿಯನ್ನು ಮಾಡುತ್ತೇನೆ. ಸಾರ್ವಜನಿಕರನ್ನು ಭೇಟಿ ಮಾಡುವುದಕ್ಕೆ ಗೃಹಕಚೇರಿ ‘ಕೃಷ್ಣಾ’ ಇದೆ. ಕೆಲವು ಶಾಸಕರು, ಅಧಿಕಾರಿಗಳನ್ನು ಭೇಟಿ ಮಾಡಲು ಇಲ್ಲಿ (ಗಂಗಾ ನಿವಾಸ) ವ್ಯವಸ್ಥೆ ಮಾಡಲಾಗಿದೆ. ನಾವ್ಯಾರೂ ಶಾಶ್ವತ ಇರಲ್ಲ, ಸಿಎಂ ಆಗಿರುವುದಕ್ಕೆ ಮನೆ ಬೇಕಲ್ಲವೇ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅನಿಲ್​ ಕಲ್ಕೆರೆ

ಅನಿಲ್ ಕಲ್ಕೆರೆ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 11 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಸೆಂಟ್ರಲ್ ಕಾಲೇಜು) ದಲ್ಲಿ Msc (ಮಾಸ್ ಕಮ್ಯುನಿಕೇಷನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೃಜನಶೀಲ ಬರವಣಿಗೆ ಜೊತೆಗೆ ವಿಧಾನಸೌಧದ ಆಡಳಿತಾತ್ಮಕ ಸುದ್ದಿಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯದ ಪ್ರಸಕ್ತ ವಿದ್ಯಮಾನಗಳನ್ನ ಒಳಗೊಂಡಂತಹ ಸುದ್ದಿಗಳತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿ ಸಾಮಾನ್ಯಜನರ ಪರ ಧ್ವನಿಯಾಗಿ ಸರ್ಕಾರಕ್ಕೆ ಸಮಸ್ಯೆ ಮುಟ್ಟಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದಾರೆ.

Read More