ಹೈಕೋರ್ಟ್ ರಿಲೀಫ್: ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಡಿಕೆ ಶಿವಕುಮಾರ್

|

Updated on: Nov 29, 2023 | 2:42 PM

ಅಕ್ರಮ ಆದಾಯ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಮಾಡಿದ ಟೀಕೆಗಳನ್ನು ವಿನಮ್ರತೆಯಿಂದ ಕೇಳಿಸಿಕೊಂಡಿರುವುದಾಗಿ ಹೇಳಿದ ಶಿವಕುಮಾರ್ ಎಲ್ಲರಿಗೂ ತಕ್ಕ ಸಮಯದಲ್ಲಿ ಉತ್ತರ ನೀಡುವುದಾಗಿ ಹೇಳಿದರು. ತಾನ್ಯಾವುದೇ ತಪ್ಪು ಮಾಡಿಲ್ಲ, ತನ್ನ ಪಾಡಿಗೆ ತಾನು ಪಕ್ಷದ ಕೆಲಸವನ್ನು ಮಾಡಿಕೊಂಡು ಹೋಗುವಾಗ ತೊಂದರೆ ಮಾಡುವ ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದರು.

ಬೆಂಗಳೂರು: ಅಕ್ರಮ ಆದಾಯ ಪ್ರಕರಣದಲ್ಲಿ ಡಿಕೆ ಶಿವಕುಮಾರ್ (DK Shivakumar) ನಿರಾಳರಾಗುವ ತೀರ್ಪನ್ನು ಕರ್ನಾಟಕ ಹೈಕೋರ್ಟ್ ನೀಡಿದ್ದರೂ ಉಪ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿಲಿಲ್ಲ. ಅಸಲಿಗೆ ತನಗಿನ್ನೂ ವಿಷಯವೇ ಗೊತ್ತಾಗಿಲ್ಲ ಎಂದು ಹೇಳಿದ ಅವರು, ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಂಬಿ ಪಾಟೀಲ್ ಅವರು ಆಯೋಜಿಸಿರುವ ಟೆಕ್ ಸಮ್ಮಿಟ್ ನಲ್ಲಿ (Tech Summit) ಭಾಗವಹಿಸಿದ್ದೆ ಎಂದು ಹೇಳಿದರು. ತಮ್ಮ ಲಾಯರ್ ನಿಂದ ಮಾಹಿತಿ ಪಡೆಯದ ಹೊರತು ಕೋರ್ಟ್ ವಿಚಾರಗಳನ್ನು ಮಾತಾಡುವುದು ಸರಿಯಲ್ಲ ಎಂದು ಶಿವಕುಮಾರ್ ಹೇಳಿದರು. ಶಿವಕುಮಾರ್ ಆದಾಯ ಮೀರಿದ ಗಳಿಕೆ ಪ್ರಕರಣದಲ್ಲಿ (disproportionate assets) ಸಿಬಿಐ ತನಿಖೆಯ ಆದೇಶವನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆದ ಬಳಿಕ ಸರ್ಕಾರದ ನಿರ್ಣಯವನ್ನು ಪ್ರಶ್ನಿಸಿದ್ದ ಸಿಬಿಐ ಮನವಿಯಮ್ಮು ಹೈಕೋರ್ಟ್ ಪರಿಗಣಿಸದ ಕಾರಣ ಅವರಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಮಾಧ್ಯಮದವರು ವಿಷಯ ತಿಳಿಸಿದ ಬಳಿಕವೂ ಅವರು ಸಂತಸದ ಪ್ರತಿಕ್ರಿಯೆ ನೀಡಲಿಲ್ಲ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ