ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ, ಮುಖ್ಯಮಂತ್ರಿ
ಉದ್ಯಮಿ ಟಿವಿ ಮೋಹನ್ ದಾಸ್ ಪೈ ಅವರು ನಗರದಲ್ಲಿ ಐಟಿ ಕಂಪನಿಗಳಿಗೆ ಪೂರಕವಾದ ಸೌಲಭ್ಯವಾಗದ ಕಾರಣ ಬೆಂಗಳೂರು ಐಟಿ-ಹಬ್ ಎಂಬ ಖ್ಯಾತಿಯನ್ನು ಕಳೆದುಕೊಳ್ಳಲಿದೆಯೋ? ಅಂತ ಟ್ವೀಟೊಂದರ ಮೂಲಕ ತಮ್ಮ ಆತಂಕವನ್ನು ವ್ಯಕ್ತಡಿಸಿರುವ ಬಗ್ಗೆ ಕೇಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಬಗ್ಗೆ ತನಗೆ ಗೊತ್ತಿಲ್ಲ ಅಂತ ಹಾರಿಕೆಯ ಉತ್ತರ ನೀಡಿದರು.
ಬೆಂಗಳೂರು: ನಗರದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿರುವುದಕ್ಕೂ ಮತ್ತು ಕಲಬುರಗಿಯಲ್ಲಿ ಆಳಂದ ಶಾಸಕ ಬಿಆರ್ ಪಾಟೀಲ್ (BR Patil) ಹೇಳಿರುವುದಕ್ಕೂ ತಾಳೆಯಾಗುತ್ತಿದೆ! ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ ನಿನ್ನೆ ಪಾಟೀಲ್ ಜೊತೆ ಮಾತಾಡಲು ಪ್ರಯತ್ನಿದರೂ ಅವರು ಸಿಕ್ಕಿರಲಿಲ್ಲ, ಇಂದು ಬೆಳಗ್ಗೆ ಮಾತುಕತೆ ಸಾಧ್ಯವಾಯಿತು, ಅವರು ತನ್ನ ಸಮಸ್ಯೆ ಹೇಳಿಕೊಂಡ ಬಳಿಕ ಬೆಂಗಳೂರಿಗೆ ಬಂದು ಮಾತಾಡಲು ತಿಳಿಸಿರುವುದಾಗಿ ಹೇಳಿದರು. ಇಂದು ಬೆಳಗ್ಗೆ ಕಲಬುರಗಿಯಲ್ಲಿ ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ್ದ ಬಿಆರ್ ಪಾಟೀಲ್, ಮುಖ್ಯಮಂತ್ರಿಯವರು ತನ್ನೊಂದಿಗೆ ಮಾತಾಡಿದ್ದು ಬೆಂಗಳೂರಿಗೆ ಬರಲು ಹೇಳಿದ್ದಾರೆ ಅಂತ ಹೇಳಿದ್ದರು. ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಅವರ ವಿರುದ್ಧ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದು ತನ್ನ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಯಾವುದೇ ವೈಮನಸಿಲ್ಲ ಅಂತ ಹೇಳಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ