ರಾಜ್ಯದಲ್ಲಿ ಕೇವಲ ಮಂತ್ರಿಗಳ ಮಕ್ಕಳಿಗೆ ಟಿಕೆಟ್ ಸಿಗ್ತಿದೆ ಅಂದಾಗ ಡಿಕೆ ಶಿವಕುಮಾರ್ ರಿಂದ ಅಸಮಂಜಸ ಸ್ಪಷ್ಟನೆ!
ಇದೇನು ಸಾರ್ ಕೇವಲ ಮಂತ್ರಿಗಳ ಮಕ್ಕಳಿಗೆ ಮಾತ್ರ ಟಿಕೆಟ್ ಕೊಡ್ತಾ ಇದ್ದೀರಿ, ಪಕ್ಷಕ್ಕಾಗಿ ಬೆವರು ಸುರಿಸಿ ದುಡಿಯುವ ಕಾರ್ಯಕರ್ತರ ಪಾಡೇನು ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕೇಳಿದರೆ, ಅವರು ಡಿಪ್ಲೋಮ್ಯಾಟಿಕ್ ಆಗಿ ಏನೇನೋ ಹೇಳುತ್ತಾರೆ. ಅವರ 40 ವರ್ಷಗಳ ರಾಜಕೀಯ ಬದುಕಿನಲ್ಲಿ ಈ ಬಾರಿಯಷ್ಟು ಹೊಸ ಮುಖ ಮತ್ತು ಯುವಕರನ್ನು ಮೊದಲು ಯಾವತ್ತೂ ನೋಡಿರಲಿಲ್ಲವಂತೆ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಪರಿವಾರ ವಾದ ಮುಂದುವರಿದಿದೆ ಅಂತ ನಾವು ಹೇಳಿತ್ತಲೇ ಇದ್ದೇವೆ. ಈಗಾಗಲೇ ವರದಿ ಮಾಡಿರುವಂತೆ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಸತೀಶ್ ಜಾರಕಿಹೊಳಿಯವರ (Satish Jarkiholi) ಮಗಳು ಪ್ರಿಯಾಂಕಾ ಮತ್ತು ಬೆಳಗಾವಿ ಕ್ಷೇತ್ರದ ಟಿಕೆಟ್ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮಗ ಮೃಣಾಲ್ ಹೆಬ್ಬಾಳ್ಕರ್ ಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ ಶಿವಾನಂದ ಪಾಟೀಲ್ ಮಗಳು ಸಂಯುಕ್ತಗೆ ಬಾಗಲಕೋಟೆ ಕ್ಷೇತ್ರದ ಟಿಕೆಟ್ ಸಿಗೋದು ಹೆಚ್ಚುಕಡಿಮೆ ಖಚಿತಪಟ್ಟಿದೆ. ಇದೇನು ಸಾರ್ ಕೇವಲ ಮಂತ್ರಿಗಳ ಮಕ್ಕಳಿಗೆ ಮಾತ್ರ ಟಿಕೆಟ್ ಕೊಡ್ತಾ ಇದ್ದೀರಿ, ಪಕ್ಷಕ್ಕಾಗಿ ಬೆವರು ಸುರಿಸಿ ದುಡಿಯುವ ಕಾರ್ಯಕರ್ತರ ಪಾಡೇನು ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಕೇಳಿದರೆ, ಅವರು ಡಿಪ್ಲೋಮ್ಯಾಟಿಕ್ ಆಗಿ ಏನೇನೋ ಹೇಳುತ್ತಾರೆ. ಅವರ 40 ವರ್ಷಗಳ ರಾಜಕೀಯ ಬದುಕಿನಲ್ಲಿ ಈ ಬಾರಿಯಷ್ಟು ಹೊಸ ಮುಖ ಮತ್ತು ಯುವಕರನ್ನು ಮೊದಲು ಯಾವತ್ತೂ ನೋಡಿರಲಿಲ್ಲವಂತೆ, ಅವರೆಲ್ಲ ಪ್ರಜ್ಞಾವಂತರು ಮತ್ತು ವಿದ್ಯಾವಂತರಾಗಿದ್ದು ಮುಂಬರುವ ವರ್ಷಗಳಲ್ಲಿ ಪಕ್ಷದ ಸ್ತಂಭಗಳೆನಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳುತ್ತಾರೆ. ಅಂದರೆ ಕಾರ್ಯಕರ್ತರು ಪ್ರಜ್ಞಾವಂತರು ಮತ್ತು ವಿದ್ಯಾವಂತರಲ್ಲವೇ ಅಂತ ಕೇಳಿದರೆ, ಕಾರ್ಯಕರ್ತರಿಗೂ ಟಿಕೆಟ್ ನೀಡಿದ್ದೇವೆ ಎಂದು ಹೇಳಿ ಧಾವಂತದಲ್ಲಿ ಮಾಧ್ಯಮದವರ ಸಮ್ಮುಖದಿಂದ ಪಾರಾಗುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಇನ್ನೂ ಮೂಡದ ಒಮ್ಮತ